ನವದೆಹಲಿ: ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ಚಂದಾದಾರರನ್ನು ಆಕರ್ಷಿಸಲು ಶೀಘ್ರವೇ ಅಗ್ಗದ ಪ್ಲ್ಯಾನ್‌ಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಕಳೆದ 1 ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಕಳೆದುಕೊಂಡಿರುವ ನೆಟ್‌ಫ್ಲಿಕ್ಸ್, ತನ್ನ ಆದಾಯದ ಕಡಿತದಿಂದ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.
Advertisement
ನೆಟ್‌ಫ್ಲಿಕ್ಸ್ ತನ್ನ ಚಂದಾದಾರರನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಅದರ ವೆಚ್ಚ. ಗ್ರಾಹಕರು ಜಾಹೀರಾತನ್ನು ಸಹಿಸಿಕೊಳ್ಳಲು ಸಿದ್ಧರಿದ್ದು, ಯೋಜನೆಯ ವೆಚ್ಚವನ್ನು ಕಡಿಮೆ ಕೊಡಲು ಬಯಸುತ್ತಾರೆ. ಜೊತೆಯಲ್ಲಿ ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್ ಹಂಚಿಕೆಯಂತಹ ಯೋಜನೆಯೂ ಕಂಪನಿಗೆ ಕಷ್ಟವನ್ನು ತಂದೊಡ್ಡಿದೆ. ಇದನ್ನೂ ಓದಿ: ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್
Advertisement
ಇದೀಗ ಕಂಪನಿ ಜಾಹೀರಾತು ಬೆಂಬಲಿತ ಅಗ್ಗದ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ತನ್ನ ಚಂದಾದಾರರನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ನೆಟ್‌ಫ್ಲಿಕ್ಸ್ ಸಿಇಒ ಟೆಡ್ ಸರಂಡೋಸ್, ಜಾಹೀರಾತು ಬೆಂಬಲಿತ ಅಗ್ಗದ ಯೋಜನೆಯನ್ನು ಬಹು ಬೇಗನೇ ಹೊರತರಲಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಭಾರತದಲ್ಲಿ ನೆಟ್‌ಫ್ಲಿಕ್ಸ್‌ನ ಹಲವಾರು ಪ್ರತಿಸ್ಪರ್ಧಿಗಳು ಜಾಹೀರಾತು ಬೆಂಬಲಿತ ಅಗ್ಗದ ಯೋಜನೆಗಳನ್ನು ಗ್ರಾಹಕರಿಗೆ ನೀಡುತ್ತದೆ. ಅದರಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಝೀ5, ವೂಟ್, ಎಂಎಕ್ಸ್ ಪ್ಲೇಯರ್ ಗ್ರಾಹಕರಿಗೆ ಜಾಹೀರಾತು ಬೆಂಬಲಿತ ಚಂದಾದಾರಿಕೆಯ ಯೋಜನೆಯನ್ನು ಒದಗಿಸುತ್ತಿದೆ. ನೆಟ್‌ಫ್ಲಿಕ್ಸ್ ಈ ವರ್ಷದ ಅಂತ್ಯದ ವೇಳೆಗೆ ಈ ಯೋಜನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಗರ್ಭಪಾತ ಚಿಕಿತ್ಸಾಲಯಗಳಿಗೆ ಭೇಟಿ ನೀಡಿದ್ರೆ ಲೊಕೇಶನ್ ಹಿಸ್ಟರಿ ಅಳಿಸುತ್ತೇವೆ: ಗೂಗಲ್