ವಾಷಿಂಗ್ಟನ್: ನೆಟ್‌ಫ್ಲಿಕ್ಸ್ ಉಚಿತ ಪಾಸ್‌ವರ್ಡ್ ಹಂಚಿಕೆ ವ್ಯವಹಾರವನ್ನು ಕೊನೆಗೊಳಿಸಲು ಹೊಸ ವಿಧಾನವನ್ನು ಪರೀಕ್ಷಿಸುತ್ತಿದೆ. ವರದಿ ಪ್ರಕಾರ ನೆಟ್‌ಫ್ಲಿಕ್ಸ್ ತನ್ನ ಚಂದಾದಾರರು ಸ್ನೇಹಿತರೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳುವುದಕ್ಕೆ ಇನ್ನು ಮುಂದೆ ಶುಲ್ಕ ವಿಧಿಸುತ್ತದೆ ಎನ್ನಲಾಗುತ್ತಿದೆ.
ಕಂಪನಿ ಇತ್ತೀಚೆಗೆ ಚಿಲಿ, ಕೋಸ್ಟರಿಕಾ ಹಾಗೂ ಪೆರುವಿನಲ್ಲಿರುವ ಚಂದಾದಾರರಿಗೆ ಹೊಸದಾಗಿ Add Extra Member(ಹೆಚ್ಚುವರಿ ಸದಸ್ಯರನ್ನು ಸೇರಿಸಿ) ಎಂಬ ಆಯ್ಕೆಯನ್ನು ಪ್ರಾರಂಭಿಸಿತು. ಆದರೆ ಈ ಫೀಚರ್‌ನಲ್ಲಿ ಚಂದಾದಾರರು ತಮ್ಮ ಖಾತೆಯನ್ನು ಮನೆ ಹೊರಗಿನ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲು ಹೆಚ್ಚುವರಿ ಪಾವತಿಸಬೇಕಾಗುತ್ತದೆ.
ನೆಟ್‌ಫ್ಲಿಕ್ಸ್ ಇದೇ ರೀತಿಯಾಗಿ ಚಿಜಜ Add a Home(ಮನೆ ಸೇರಿಸಿ) ಎಂಬ ಫೀಚರ್ ಅನ್ನು ಕೆಲವು ದೇಶಗಳಲ್ಲಿ ಘೋಷಿಸಿದೆ. ಈ ಫೀಚರ್ ಅನ್ನು ಅರ್ಜೆಂಟೀನಾ, ಡೊಮಿನಿಕನ್ ರಿಪಬ್ಲಿಕ್, ಎಲ್ ಸಾಲ್ವಡಾರ್, ಗ್ವಾಟೆಮಾಲಾ ಹಾಗೂ ಹೊಂಡುರಾಸ್ ದೇಶಗಳಲ್ಲಿ ಪರೀಕ್ಷಿಸಲು ಪ್ರಾರಂಭಿಸುತ್ತಿದೆ. ಆದರೆ ಭಾರತದಲ್ಲಿ ಬಳಕೆದಾರರಿಗೆ ಶುಲ್ಕ ವಿಧಿಸುವ ಅಥವಾ ಬಳಕೆದಾರರ ಮನೆ ಹೊರಗಿನ ವ್ಯಕ್ತಿಗಳಿಗೆ ಪಾಸ್‌ವರ್ಡ್ ಹಂಚಿಕೊಳ್ಳುವ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಸಾವಿರ ಗಡಿದಾಟಿದ ಕೊರೊನಾ – ಬೆಂಗ್ಳೂರಲ್ಲಿ 1,013 ಕೇಸ್, 1,104 ಮಂದಿ ಡಿಸ್ಚಾರ್ಜ್
ವರ್ಷದ ಅಂತ್ಯದ ವೇಳೆಗೆ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೊಳ್ಳುವ ಎಲ್ಲಾ ಬಳಕೆದಾರರಿಗೂ ಶುಲ್ಕ ವಿಧಿಸಲು ಪ್ರಾರಂಭಿಸುವುದಾಗಿ ಈ ಹಿಂದೆಯೇ ಸುಳಿವು ನೀಡಿತ್ತು. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ಕಂಪನಿ Add a Home ಫೀಚರ್ ಅನ್ನು ಭಾರತಕ್ಕೂ ತರುವ ಸಾಧ್ಯತೆ ಇದೆ.
Add a Home ಫೀಚರ್ ಮುಂದಿನ ತಿಂಗಳಿನಲ್ಲಿ ತಿಳಿಸಲಾದ ದೇಶಗಳಲ್ಲಿ ಪ್ರಾರಂಭವಾಗುತ್ತಿದ್ದು, ಇದು ಚಂದಾದಾರರ ಮನೆಯಲ್ಲಿರುವ ಸದಸ್ಯರಿಗೆ ಮಾತ್ರವೇ ಯಾವುದೇ ಡಿವೈಸ್‌ಗಳಲ್ಲಿ ಉಚಿತವಾಗಿ ಬಳಸಲು ಸಾಧ್ಯವಾಗಲಿದೆ. ಪ್ರಯಾಣಿಸುವ ಸಂದರ್ಭದಲ್ಲೂ ಇದನ್ನು ಬಳಸಲು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಹಳೆ ಮೈಸೂರು ಜೀವನಾಡಿ KRS ಭರ್ತಿ- ನಾಳೆ ಸಿಎಂ ಬಾಗಿನ ಅರ್ಪಣೆ
ಮನೆ ಸದಸ್ಯರನ್ನು ಹೊರತುಪಡಿಸಿ ಹೊರಗಿನ ವ್ಯಕ್ತಿಗಳೊಂದಿಗೆ ನೆಟ್‌ಫ್ಲಿಕ್ಸ್‌ನ ಖಾತೆಯನ್ನು ಹಂಚಿಕೊಳ್ಳಲು ಬಯಸುವವರು ಇದಕ್ಕಾಗಿ ಶುಲ್ಕವನ್ನು ಭರಿಸಬೇಕಾಗುತ್ತದೆ.