ನವದೆಹಲಿ: ಭಾರತೀಯ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಒಂದು ಸಿಹಿ ಸುದ್ದಿ. ದೇಶದಲ್ಲಿ ತನ್ನ ಬಳಕೆದಾರರನ್ನು ಹೆಚ್ಚಿಸುವ ಉದ್ದೇಶದಿಂದ ನೆಟ್‌ಫ್ಲಿಕ್ಸ್ ತನ್ನ ಪ್ಲ್ಯಾನ್‌ಗಳ ಬೆಲೆಯನ್ನು ಇಳಿಸಿದೆ.
2016ರಲ್ಲಿ ಸೇವೆಯನ್ನು ನೀಡಲು ಪ್ರಾರಂಭಿಸಿದ ನೆಟ್‌ಫ್ಲಿಕ್ಸ್ ಇದೇ ಮೊದಲ ಬಾರಿಗೆ ತನ್ನ ಪ್ಲ್ಯಾನ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ಟೆಲಿಕಾಂ ಕಂಪನಿಗಳು ತನ್ನ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಬೆಲೆಯನ್ನು ಹೆಚ್ಚಿಸಿರುವ ಸಮಯದಲ್ಲಿ ನೆಟ್‌ಫ್ಲಿಕ್ಸ್ ಬೆಲೆಯನ್ನು ಕಡಿಮೆ ಮಾಡುತ್ತಿರುವುದು ಬಳಕೆದಾರರಿಗೆ ಖರ್ಚನ್ನು ಸರಿದೂಗಿಸಲು ಸಹಕಾರಿಯಾಗಿದೆ.
Advertisement
Advertisement
ಅಮೆಜಾನ್ ಪ್ರೈಮ್ ತನ್ನ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದ ಬೆನ್ನಲ್ಲೇ ನೆಟ್‌ಫ್ಲಿಕ್ಸ್ನ ಈ ಮುನ್ನಡೆ ಬಳಕೆದಾರರಿಗೆ ಖುಷಿಯ ವಿಚಾರ. ಮುಖ್ಯವಾಗಿ ಮೊಬೈಲ್ ಪ್ಲ್ಯಾನ್‌ಗಳ ಬೆಲೆಯನ್ನು 199 ರೂ. ಯಿಂದ 149 ರೂ.ಗೆ ಇಳಿಸಿದೆ. ಈ ಪ್ಲ್ಯಾನ್ ನಿಂದ ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ 480 ಪಿ ಕ್ವಾಲಿಟಿಯ ವೀಡಿಯೋಗಳನ್ನು ವೀಕ್ಷಿಸಬಹುದು. ಇದನ್ನೂ ಓದಿ: ಅರ್ಜುನ್ ಸರ್ಜಾಗೆ ಕೊರೊನಾ ಪಾಸಿಟಿವ್
Advertisement
ನೆಟ್‌ಫ್ಲಿಕ್ಸ್ನ ಬೇಸಿಕ್ ಯೋಜನೆ ಒಂದು ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್, ಟಿವಿ ಸ್ಕ್ರೀನ್‌ಗಳಲ್ಲಿ ಒಂದೇ ಸಮಯದಲ್ಲಿ ವೀಕ್ಷಿಸಬಹುದು. ಇದನ್ನು ಕೂಡಾ 480 ಪಿ ಯಲ್ಲಿ ವೀಕ್ಷಣೆಗೆ ಅವಕಾಶವಿದ್ದು, ಅದರೆ ಬೆಲೆ 199 ರೂ.ಗೆ ಇಳಿಕೆಯಾಗಿದೆ. ಈ ಯೋಜನೆ ಮೊದಲಿಗೆ 499 ರೂ. ಇತ್ತು.
Advertisement
ಬಳಕೆದಾರರಿಗೆ ಹೈ ಡೆಫಿನಿಷನ್ ವೀಡಿಯೋಗಳನ್ನು ನೋಡಲು ಸ್ಟಾಂಡರ್ಡ್ ಕ್ವಾಲಿಟಿಯ ಆಯ್ಕೆ ಇದೆ. ಇದು 649 ರೂ. ಯಿಂದ 499 ರೂ.ಗೆ ಇಳಿದಿದೆ. ಈ ಯೋಜನೆ ಬಳಕೆದಾರರಿಗೆ ಒಂದೇ ಸಮಯದಲ್ಲಿ ಎರಡು ಭಿನ್ನ ಸಾಧನಗಳಲ್ಲಿ ವೀಡಿಯೋ ವೀಕ್ಷಿಸಲು ಅವಕಾಶ ನೀಡುತ್ತದೆ.
ಪ್ರೀಮಿಯಂ ಪ್ಲ್ಯಾನ್‌ಗೆ ಬಂದರೆ 799 ರೂ. ಇದ್ದ ದರ 649 ರೂ.ಗೆ ಇಳಿಸಲಾಗಿದೆ. ಇದರಲ್ಲಿ ಬಳಕೆದಾರರು 4ಕೆ ಪ್ಲಸ್ ಹೆಚ್‌ಡಿಆರ್‌ನಲ್ಲಿ ವೀಡಿಯೋ ವೀಕ್ಷಿಸಬಹುದು. ಇದರೊಂದಿಗೆ ಒಂದೇ ಬಾರಿಗೆ ನಾಲ್ಕು ಸಾಧನಗಳಲ್ಲಿ ವೀಡಿಯೋ ವೀಕ್ಷಣೆಗೆ ಇದು ಅವಕಾಶ ನೀಡುತ್ತದೆ. ಇದನ್ನೂ ಓದಿ: ಸಾಹುಕಾರನಿಗೆ ಸವಾಲು ಹಾಕಿ ಎರಡನೇ ಬಾರಿ ಗೆದ್ದ ಹೆಬ್ಬಾಳ್ಕರ್
ಹೀಗೆ ನೆಟ್‌ಫ್ಲಿಕ್ಸ್ ಜನರನ್ನು ಆಕರ್ಷಿಸಲು ಈ ರೀತಿಯ ಯೋಜನೆ ತಂದಿದೆ. ಕುತೂಹಲಕಾರಿ ವಿಷಯವೆಂದರೆ ಅಮೆಜಾನ್ ಪ್ರೈಮ್ ತನ್ನ ಬೆಲೆಯನ್ನು ಏರಿಕೆ ಮಾಡಿರುವುದರಿಂದ ಅದರ ಬಳಕೆದಾರರು ನೆಟ್‌ಫ್ಲಿಕ್ಸ್ ಕಡೆ ವಾಲುವ ಸಾಧ್ಯತೆ ಇದೆ.