ವಾಷಿಂಗ್ಟನ್: ಇತ್ತೀಚೆಗೆ ನೆಟ್ಫ್ಲಿಕ್ಸ್ ಭಾರತದಲ್ಲಿ ಸಬ್ಸ್ಕ್ರಿಪ್ಶನ್ ಯೋಜನೆಯ ದರವನ್ನು ಕಡಿಮೆ ಮಾಡಿತ್ತು. ಆದರೆ ಇಂದು ನೆಟ್ಫ್ಲಿಕ್ಸ್ ಅಮೇರಿಕಾ ಹಾಗೂ ಕೆನಡಾದಲ್ಲಿ ಮಾಸಿಕ ಹಾಗೂ ವಾರ್ಷಿಕ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ.
ಭಾರತದಲ್ಲಿ ನೆಟ್ಫ್ಲಿಕ್ಸ್ ಹೊಸ ಚಂದಾದಾರರನ್ನು ಆಕರ್ಷಿಸಲು ಯೋಜನೆಗಳ ಬೆಲೆಯನ್ನು ಕಡಿತಗೊಳಿಸಿತ್ತು. ಮಾಸಿಕ ಯೋಜನೆಯ ದರ 149 ರೂ. ಯಿಂದ ಪ್ರಾರಂಭವಾಗುವಂತೆ ಮಾಡಿತ್ತು. ಆದರೆ ನೆಟ್ಫ್ಲಿಕ್ಸ್ ಅಮೇರಿಕಾ ಹಾಗೂ ಕೆನಡಾದಲ್ಲಿ ತನ್ನ ಮಾಸಿಕ ದರವನ್ನು 1 ಡಾಲರ್ನಿಂದ(74 ರೂ.) 2 ಡಾಲರ್(148 ರೂ.) ವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ನೆಟ್ಫ್ಲಿಕ್ಸ್ ಪ್ಲ್ಯಾನ್ಗಳು ಅಗ್ಗ – ಹಿಂದೆ ಎಷ್ಟಿತ್ತು? ಈಗ ಎಷ್ಟು ಇಳಿಕೆಯಾಗಿದೆ?
Advertisement
Advertisement
ಅಮೇರಿಕಾದಲ್ಲಿ ನೆಟ್ಫ್ಲಿಕ್ಸ್ನ ಪ್ರಾರಂಭಿಕ ಯೋಜನೆ 9.99 ಡಾಲರ್(743 ರೂ.)ನಿಂದ ಪ್ರಾರಂಭವಾಗುತ್ತದೆ. ಸ್ಟ್ಯಾಂಡರ್ಡ್ ಪ್ಲ್ಯಾನ್ 14 ಡಾಲರ್(1041 ರೂ.)ನಿಂದ 15.50 ಡಾಲರ್(1152 ರೂ.)ಗೆ ಹೆಚ್ಚಿಸಿದೆ. 4ಕೆ ಯೋಜನೆಯ ಬೆಲೆ ತಿಂಗಳಿಗೆ 18 ಡಾಲರ್(1338 ರೂ.)ನಿಂದ 20 ಡಾಲರ್(1487 ರೂ.)ಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಟೆಸ್ಲಾ ಕಾರು ಬಗ್ಗೆ ಅಪ್ಡೇಟ್ – ಮಸ್ಕ್ ಒತ್ತಡ ತಂತ್ರಗಳಿಗೆ ಬಗ್ಗಲ್ಲ ಎಂದ ಕೇಂದ್ರ
Advertisement
ಕೆನಡಾದಲ್ಲಿ ಸ್ಟ್ಯಾಂಡರ್ಡ್ ಪ್ಲ್ಯಾನ್ 14.99 ಕೆನಡಾ ಡಾಲರ್(888 ರೂ.)ನಿಂದ 16.49 ಡಾಲರ್(977 ರೂ.)ಗೆ ಹೆಚ್ಚಿಸಲಾಗಿದೆ. ಪ್ರೀಮಿಯಂ ಯೋಜನೆಯನ್ನು 20 ಡಾಲರ್(1185 ರೂ.)ನಿಂದ 20.99 ಡಾಲರ್(1244 ರೂ.)ಗೆ ಹೆಚ್ಚಿಸಲಾಗಿದೆ. ಆದರೆ ಪ್ರಾರಂಭಿಕ ಯೋಜನೆಯನ್ನು ಹೆಚ್ಚಿಸಿಲ್ಲ. ಬದಲಾಗಿ 9.99 ಕೆನಡಾ ಡಾಲರ್(592 ರೂ.)ನಲ್ಲಿಯೇ ಉಳಿದುಕೊಂಡಿದೆ.