ನವದೆಹಲಿ: ಇನ್ಮುಂದೆ ಭಾರತದಲ್ಲಿ ಪಾಸ್‌ವರ್ಡ್ (Netflix Password) ಹಂಚಿಕೆ ಮಾಡಿಕೊಳ್ಳುವುದನ್ನ ಕೊನೆಗೊಳಿಸಿರುವುದಾಗಿ ನೆಟ್‌ಫ್ಲಿಕ್ಸ್ ಗುರುವಾರ ಘೋಷಿಸಿದೆ. ನೆಟ್‌ಫ್ಲಿಕ್ಸ್ (Netflix) ಒಂದು ಖಾತೆಯನ್ನ ಒಂದು ಕುಟುಂಬದವರು ಬಳಕೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದೆ.
ಕಳೆದ ವರ್ಷ ನೆಟ್‌ಫ್ಲಿಕ್ಸ್ ಹೆಚ್ಚಿನ ಚಂದಾದಾರನ್ನ ಕಳೆದುಕೊಂಡ ನಂತರ ಕಂಪನಿಯ ಆದಾಯ ಹೆಚ್ಚಿಸುವ ಸಲುವಾಗಿ ಈ ಪ್ರಯತ್ನಕ್ಕೆ ಮುಂದಾಗಿದೆ. ಅದರಂತೆ ಭಾರತದಲ್ಲಿ ಪಾಸ್‌ವರ್ಡ್ ಹಂಚಿಕೆ ಮಾಡಿಕೊಳ್ಳುವುದನ್ನ ನಿಷೇಧಿಸಿದೆ. ಇದರಿಂದಾಗಿ ನೆಟ್‌ಫ್ಲಿಕ್ಸ್ ಖಾತೆಯು ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಅಲ್ಲದೇ ಆ ಪಾಸ್‌ವರ್ಡ್ ಅನ್ನು ಮತ್ತೊಬ್ಬರು ಬಳಸಲು ಪ್ರಯತ್ನಿಸಿದರೆ ಮುಂದೆ ಅವಕಾಶ ನೀಡುವುದಿಲ್ಲ. ಇದನ್ನೂ ಓದಿ: Twitter Monetisation: ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಟ್ವಿಟ್ಟರ್‌ನಿಂದ ಸಿಗುತ್ತೆ ಹಣ – ಹೇಗೆ ಅಂತೀರಾ..?
Advertisement
Advertisement
ಕಂಪನಿಯ ಪ್ರಕಾರ, ಒಂದು ಖಾತೆಯನ್ನು ಒಂದು ಮನೆಯಲ್ಲಿ ಮಾತ್ರ ಬಳಸಬೇಕು. ಜೊತೆಗೆ ಪ್ರೊಫೈಲ್ ವರ್ಗಾವಣೆಯ (Transfer Profile) ಪ್ರಯೋಜನವನ್ನೂ ಪಡೆಯಬಹುದು ಎಂದು ಹೇಳಿದೆ. ಈ ಹಿಂದೆ ನೆಟ್‌ಫ್ಲಿಕ್ಸ್ ಭಾರತದ ಹೊರಗೆ ಪಾಸ್‌ವರ್ಡ್ ಹಂಚಿಕೆಯನ್ನ ನಿಷೇಧಿಸಿತ್ತು. ಆದ್ರೆ ಪಾಸ್‌ವರ್ಡ್ ಶೇರಿಂಗ್ ನಿಷೇಧಿಸಿದ ನಂತರ ಚಂದಾದಾರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.
Advertisement
ಈಗಾಗಲೇ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೊಳ್ಳುವವರಿಗೆ ಇ-ಮೇಲ್ ಕಳುಹಿಸಲು ಪ್ರಾರಂಭಿಸಿದ್ದೇವೆ. ನಮ್ಮ ಚಂದಾದಾರಿಗೆ ವಿವಿಧ ಮನರಂಜನಾ ಆಯ್ಕೆಗಳನ್ನು ನೀಡಲು ಹೊಸ ಪ್ರಯತ್ನಗಳು ನಡೆದಿದೆ. ವಿವಿಧ ರೀತಿಯ ಹೊಸ ಸಿನಿಮಾಗಳು, ಟಿವಿ ಶೋಗಳಲ್ಲಿ ಹೂಡಿಕೆ ಮುಂದುವರಿಸಿದ್ದೇವೆ ಎಂದೂ ಕಂಪನಿ ಹೇಳಿದೆ. ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಎಂದರೇನು? ಅನುಕೂಲ, ಅನಾನುಕೂಲಗಳೇನು?
Advertisement
ಅಮೆರಿಕ (USA), ಬ್ರಿಟನ್, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸಿಂಗಾಪುರ, ಮೆಕ್ಸಿಕೋ ಮತ್ತು ಬ್ರೆಜಿಲ್‌ನಂತಹ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಪಾಸ್‌ವರ್ಡ್ ಹಂಚಿಕೆಯ ಮೇಲೆ ಮೇ ತಿಂಗಳಲ್ಲಿ ನೆಟ್‌ಫ್ಲಿಕ್ಸ್ ನಿರ್ಬಂಧ ವಿಧಿಸಿತ್ತು. ಇದರಿಂದ 60 ಲಕ್ಷ ಮಂದಿ ಹೊಸ ಚಂದಾದಾರರನ್ನು ಒಳಗೊಳ್ಳಲು ಸಹಾಯಕವಾಗಿದೆ. ಕಳೆದ ತ್ರೈಮಾಸಿಕ ಅಂದಾಜಿನ ಪ್ರಕಾರ 23.8 ಕೋಟಿ ಚಂದಾದಾರರನ್ನ ಒಳಗೊಂಡಿದ್ದು 1.5 ಶತಕೋಟಿ ಡಾಲರ್‌ನಷ್ಟು ಲಾಭ ಗಳಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಹಿಂದೆ ನೆಟ್‌ಫ್ಲಿಕ್ಸ್, 2020ರಲ್ಲಿ ಕೋವಿಡ್ ಕಾರಣದಿಂದ ನಮ್ಮ ಕಂಪನಿಯ ಆದಾಯ ಗಣನೀಯವಾಗಿ ಏರಿಕೆ ಕಂಡಿತ್ತು. 2021ರಲ್ಲಿ ಕೋವಿಡ್ ಇಳಿಕೆಯಿಂದಾಗಿ ನಿಧಾನಗತಿಯಲ್ಲಿ ಆದಾಯವೂ ಇಳಿಯತೊಡಗಿತು ಎಂದು ಹೇಳಿಕೊಂಡಿತ್ತು.
Web Stories