ಏಕತಾ ಪ್ರತಿಮೆ ಅನಾವರಣವಾದ ಮರುದಿನವೇ ನೇತಾಜಿ ಪ್ರತಿಮೆಗೆ ಬೇಡಿಕೆ ಇಟ್ಟ ಕುಟುಂಬಸ್ಥರು

Public TV
1 Min Read
Vallabhbhai Patel Subhas Chandra Bose

ಕೋಲ್ಕತ್ತಾ: ಗುಜರಾತ್‍ನಲ್ಲಿ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಅನಾವರಣದ ಬೆನ್ನಲ್ಲೇ ನೇತಾಜಿ ಸುಭಾಷ್‍ಚಂದ್ರ ಬೋಸ್ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಬೇಡಿಕೆ ಇಟ್ಟಿದ್ದಾರೆ.

ಹೌದು, ನವದೆಹಲಿ ಇಂಡಿಯಾ ಗೇಟ್ ಆವರಣದಲ್ಲಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಪ್ರತಿಮೆ ನಿರ್ಮಿಸಿ ಹಾಗೂ ಅವರ ಜನ್ಮದಿನವಾದ ಜನವರಿ 23ರನ್ನು ‘ವಿಮೋಚನಾ ದಿನ’ವೆಂದು ಘೋಷಿಸಬೇಕು ಎಂದು ನೇತಾಜಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಏಕತಾ ಪ್ರತಿಮೆ ನಿರ್ಮಾಣದಲ್ಲಿ ತನ್ನ ದಿಟ್ಟತನವನ್ನು ತೋರಿದೆ. ಹಾಗೇ ಮುಂದಿನ ವರ್ಷ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ವಿಮೋಚನಾ ದಿನವೆಂದು ಘೋಷಿಸಬೇಕು. ಜೊತೆಗೆ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನೇತಾಜಿ ಸೋದರನ ಮೊಮ್ಮಗ ಚಂದ್ರಕುಮಾರ್ ಭೋಸ್ ಅವರು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಸುಭಾಷ್‍ಚಂದ್ರ ಬೋಸ್ ಅವರ ಆಝಾದ್ ಹಿಂದ್ ಫೌಜ್ ಸ್ಥಾಪನೆ 75ನೇ ವರ್ಷದ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ವಿಶೇಷವಾಗಿ ಕಾರ್ಯಕ್ರಮಕ್ಕೆ ಆಝಾದ್ ಹಿಂದ್ ಫೌಜ್ ಟೋಪಿಯನ್ನು ಧರಿಸಿ ಗಮನಸೆಳೆದಿದ್ದರು. ಈಗ ಹೊಸ ಬೇಡಿಕೆಯನ್ನು ಬೋಸ್ ಕುಟುಂಬಸ್ಥರು ಇಟ್ಟಿದ್ದು ಈಗ ಭಾರೀ ಚರ್ಚೆ ಆಗುತ್ತಿದೆ. ಇದನ್ನು ಓದಿ: ಸ್ವಾತಂತ್ರ್ಯ ಸಿಕ್ಕಿ ವರ್ಷಗಳು ಕಳೆದರೂ ನೇತಾಜಿ ಕನಸ್ಸನ್ನು ನನಸು ಮಾಡಲು ಸಾಧ್ಯವಾಗಿಲ್ಲ: ಮೋದಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Subhas Chandra Bose

Share This Article
Leave a Comment

Leave a Reply

Your email address will not be published. Required fields are marked *