ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಬಾಲಿವುಡ್ ನಲ್ಲಿರುವ ನೆಪೋಟಿಸಂ ಬಗ್ಗೆ ಆಗಾಗ್ಗೆ ಧ್ವನಿ ಎತ್ತುತ್ತಲೇ ಇರುತ್ತಾರೆ. ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ಪ್ರದಾನ ಬೆನ್ನಲ್ಲೇ ಮತ್ತೆ ನೆಪೋಟಿಸಂ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಕೆಲವು ಪ್ರಶಸ್ತಿಗಳ ಕುರಿತಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ನೇರವಾಗಿ ಅವರು ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯ ಕುರಿತು ಟೀಕೆ ಮಾಡಿದ್ದಾರೆ.
Advertisement
ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿಯಲ್ಲಿ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಅವರಿಗೆ ಅತ್ಯುತ್ತಮ ನಟಿ ಹಾಗೂ ನಟ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಬಗ್ಗೆ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದು, ಅರ್ಹ ಪ್ರತಿಭೆಗಳಿದ್ದರೂ, ಅವರಿಂದ ಈ ಪ್ರಶಸ್ತಿಯನ್ನು ಕಸಿದುಕೊಳ್ಳಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇಂತಹ ಪ್ರಶಸ್ತಿಗಳಿಂದಾಗಿ ಇನ್ನೂ ನೆಪೋಟಿಸಂ ಜೀವಂತವಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ಸಿಂಬು ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ನಟಿ ಹನ್ಸಿಕಾ ಮೋಟ್ವಾನಿ
Advertisement
Advertisement
ಕನ್ನಡದ ರಿಷಬ್ ಶೆಟ್ಟಿ, ಅನುಪಮ್ ಖೇರ್, ದಿ ಕಾಶ್ಮೀರ್ ಫೈಲ್ಸ್, ಆರ್.ಆರ್.ಆರ್ ಸಿನಿಮಾಗಳಿಗೂ ಈ ಬಾರಿ ಪ್ರಶಸ್ತಿ ಬಂದಿದ್ದು, ಅವರನ್ನೆಲ್ಲ ಶ್ಲ್ಯಾಘಿಸಿದ್ದಾರೆ. ನಿಜಕ್ಕೂ ಇಂತಹ ಸಿನಿಮಾ ಮತ್ತು ನಟರಿಗೆ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕಂಗನಾ ಬರೆದಿರುವುದು ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಗಳು ಕೂಡ ಬಂದಿವೆ.
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Very nice post. I just stumbled upon your blog and wanted to say that I’ve really enjoyed browsing your blog posts. In any case I’ll be subscribing to your feed and I hope you write again soon!