ಡೆಹ್ರಾಡೂನ್: ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯ ಡ್ಯಾನ್ಸ್ ಬಾರ್‌ನಲ್ಲಿ ನೇಪಾಳಿ ಮಹಿಳೆ ಹತ್ಯೆ ಪ್ರಕರಣದಲ್ಲಿ ಸೇನೆಯ ಲೆಫ್ಟಿನೆಂಟ್ ಕರ್ನಲ್‌ನನ್ನು ಬಂಧಿಸಲಾಗಿದೆ ಎಂದು ಡೆಹ್ರಾಡೂನ್ ಪೊಲೀಸರು ತಿಳಿಸಿದ್ದಾರೆ.
ಸಿರ್ವಾಲ್ ಗಡ್ ಪ್ರದೇಶದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆ ನೇಪಾಳದವರಾಗಿದ್ದು, ಸಿಲಿಗುರಿಯಲ್ಲಿ ವಾಸವಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ಮಣಿಪುರದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮೂವರು ಆದಿವಾಸಿಗಳ ಹತ್ಯೆ
ಕ್ಲೆಮೆಂಟ್ ಟೌನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಸೇನಾಧಿಕಾರಿ ರಾಮೇಂದು ಉಪಾಧ್ಯಾಯ ವಿವಾಹಿತ. ಆದರೂ 30 ವಯಸ್ಸಿನ ಅವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಆಕೆಯನ್ನು ಯೋಧ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಡಿತ್ವಾರಿ ಪ್ರೇಮ್ ನಗರದಲ್ಲಿರುವ ಮನೆಯಿಂದ ಯೋಧನನ್ನು ಬಂಧಿಸಲಾಗಿದೆ.
ಹತ್ಯೆಯಾದ ಶ್ರೇಯಾ ಶರ್ಮಾ, ಹಿಂದೆ ಸಿಲಿಗುರಿಯ ಡ್ಯಾನ್ಸ್ ಬಾರ್‌ನಲ್ಲಿ ಆರೋಪಿಯನ್ನು ಭೇಟಿಯಾಗಿದ್ದರು. ನಂತರ ಅವರ ಸಂಬಂಧ ಮೂರು ವರ್ಷಗಳ ಕಾಲ ಮುಂದುವರಿಯಿತು. ಸೇನಾಧಿಕಾರಿ ಡೆಹ್ರಾಡೂನ್‌ಗೆ ವರ್ಗಾವಣೆಯಾದಾಗ, ತನ್ನೊಂದಿಗೆ ಶ್ರೇಯಾಳನ್ನು ಕರೆತಂದಿದ್ದ. ಅಲ್ಲಿ ಆಕೆಗೆ ಬಾಡಿಗೆಗೆ ಫ್ಲಾಟ್ ತೆಗೆದುಕೊಟ್ಟಿದ್ದ ಎನ್ನುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್
ಉಪಾಧ್ಯಾಯ ಶನಿವಾರ ರಾತ್ರಿ ರಾಜ್‌ಪುರ ರಸ್ತೆಯ ಕ್ಲಬ್‌ನಲ್ಲಿ ಮಹಿಳೆಯೊಂದಿಗೆ ಮದ್ಯ ಸೇವಿಸಿದ್ದ. ಆಕೆಯನ್ನು ಲಾಂಗ್ ಡ್ರೈವ್‌ಗೆ ಕರೆದೊಯ್ದಿದ್ದ. ನಗರದ ಹೊರವಲಯದಲ್ಲಿರುವ ನಿರ್ಜನ ಪ್ರದೇಶವಾದ ಥಾನೋ ರಸ್ತೆ ತಲುಪಿದ ಬಳಿಕ ರಾತ್ರಿ 1:30 ರ ಸುಮಾರಿಗೆ ಕಾರು ನಿಲ್ಲಿಸಿ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೇಯಾಳನ್ನು ಕೊಂದ ನಂತರ ಉಪಾಧ್ಯಾಯ ಆಕೆಯ ಶವವನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದ್ದ.
Web Stories