ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ನೇಪಾಳಿ ಕಳ್ಳರ ಕಟಂಕ ಹೆಚ್ಚಾಗುತ್ತಿದ್ದು, ಶ್ರೀಮಂತರ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನಕ್ಕಿಳಿದಿದ್ದಾರೆ.
ಸಭ್ಯರು, ಮುಗ್ಧರಂತೆ ಮನೆಗೆಲಸಕ್ಕೆ ಸೇರಿಕೊಳ್ಳುವ ನೇಪಾಳಿಗರು ಮನೆಯ ಸಂಪೂರ್ಣ ಮಾಹಿತಿ ತಿಳಿದು ಉಂಡ ಮನೆಗೆ ಕನ್ನ ಹಾಕುತ್ತಾರೆ. ಸೆಕ್ಯೂರಿಟಿ, ಮನೆಗೆಲಸ ಎಂದು ದಂಪತಿ ಜೊತೆಯಾಗಿ ಸೇರಿ ದರೋಡೆ ಮಾಡುತ್ತಾರೆ.
Advertisement
ಒಂದಲ್ಲ, ಎರಡಲ್ಲ ಇಲ್ಲಿಯವರೆಗೆ ಸಾಲುಸಾಲು ಕೇಸ್‌ಗಳು ವರದಿಯಾಗಿವೆ. ಮನೆಗೆಲಸ, ಸೆಕ್ಯೂರಿಟಿ ಕೆಲಸಗಳನ್ನೇ ಇವರು ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮನೆ, ಫ್ಲ್ಯಾಟ್‌ಗಳಲ್ಲಿ ಯಾರು ಇಲ್ಲದ ಸಮಯ ನೋಡಿ ಯೋಜನೆ ಹಾಕಿ, ಬಳಿಕ ಕಾರ್ಯರೂಪಕ್ಕೆ ತರುವ ಚಾಲಾಕಿ ಕಳ್ಳರಾಗಿದ್ದಾರೆ.ಇದನ್ನೂ ಓದಿ: ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸಬೇಡಿ: ಪುಟಿನ್‌ಗೆ ಕರೆ ಮಾಡಿ ಮಾತಾಡಿದ ಟ್ರಂಪ್
Advertisement
Advertisement
ಇಲ್ಲಿಯವರೆಗೆ ನೇಪಾಳಿ ಕಳ್ಳರ ಮೇಲೆ 6 ಕೇಸ್‌ಗಳು ದಾಖಲು:
Advertisement
1) 2021ರ ಏಪ್ರಿಲ್‌ನಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಮಿ ಆಫೀಸರ್ ಮನೆಗಳ್ಳತನ ವಾಗಿತ್ತು. ಪಕ್ಕದ ಅಪಾರ್ಟ್ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿದ್ದ ನಾಲ್ವರು ನೇಪಾಳಿಗರು ಸೇರಿ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಕಳ್ಳತನ ಮಾಡಿ 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಹಣಗಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳನ್ನು ನೇಪಾಳಕ್ಕೆ ಪರಾರಿಯಾಗುತ್ತಿದ್ದ ಮಾರ್ಗದಲ್ಲಿ ಬಂಧಿಸಿದ್ದರು.
2) 2021ರ ಡಿಸೆಂಬರ್‌ನಲ್ಲಿ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿ ಮನೆಯಲ್ಲಿ ಕಳ್ಳತನವಾಗಿತ್ತು. ಅಪಾರ್ಟ್ಮೆಂಟ್‌ನಲ್ಲಿ ಸೆಕ್ಯೂರಿಟಿಯಾಗಿದ್ದ ನಾಲ್ವರು ನೇಪಾಳಿಗಳು ಕೃತ್ಯ ಎಸಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆಂಧ್ರ ಮೂಲದ ಉದ್ಯಮಿ ಪ್ಲ್ಯಾಟ್ ನಲ್ಲಿ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಗದು ಕಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳನ್ನು ನೇಪಾಳಕ್ಕೆ ಪರಾರಿಯಾಗುವ ಮುನ್ನವೇ ಬಂಧಿಸಿದ್ದರು.
3) 2023 ನವೆಂಬರ್‌ನಲ್ಲಿ ಮಹಾಲಕ್ಷ್ಮಿ ಲೇಔಟ್‌ನ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ಮನೆಯಲ್ಲಿ ಮನೆಗಳ್ಳತನವಾಗಿತ್ತು. ಭ್ರಮರೇಶ್ ಪಕ್ಕದ ಮನೆಯಲ್ಲಿ ಕೆಲಸಕ್ಕಿದ್ದ ಕೆಲ ಆರೋಪಿಗಳು ಕಳ್ಳತನ ಮಾಡಿದ್ದರು. ಭ್ರಮರೇಶ್ ಕುಟುಂಬ ವಿದೇಶಕ್ಕೆ ಹೋಗಿದ್ದಾಗ 7 ಜನರು ಕೃತ್ಯ ಎಸಗಿದ್ದು, 1.53 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಕದ್ದಿದ್ದರು.
4) 2024 ಏಪ್ರಿಲ್‌ನಲ್ಲಿ ಸಂಜಯ್ ನಗರದಲ್ಲಿರುವ ಮಾಜಿ ಮೇಯರ್ ನಾರಾಯಣ ಸ್ವಾಮಿ ಮನೆ ದರೋಡೆಯಾಗಿತ್ತು. ಅವರು ಚುನಾವಣಾ ಪ್ರಚಾರಕ್ಕೆ ಹೋಗಿದ್ದಾಗ ಅದೇ ಮನೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದ ವ್ಯಕ್ತಿ, ತನ್ನ ಸಹಚರನೊಂದಿಗೆ ಸೇರಿ ದರೋಡೆ ಮಾಡಿದ್ದ. 1.30 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ದರೋಡೆಯಾಗಿತ್ತು. ಇದನ್ನು ಕೂಡ ಭ್ರಮರೇಶ್ ಮನೆ ದೋಚಿದ್ದ ಅಸಾಮಿಯೇ ಮಾಡಿದ್ದ. ಆದರೆ ಜೈಲು ಸೇರಿದ 6 ತಿಂಗಳಲ್ಲಿ ಜಾಮೀನು ಪಡೆದು ನಾರಾಯಣಸ್ವಾಮಿ ಮನೆ ಕೆಲಸಕ್ಕೆ ಸೇರಿದ್ದ. ಪೊಲೀಸರು ಹಿಡಿಯುವ ಮುನ್ನವೇ ಇಬ್ಬರು ನೇಪಾಳ ಸೇರಿದ್ದರು. ಆದರೆ ಪೊಲೀಸರು ನೇಪಾಳಕ್ಕೆ ತಲುಪಿ ಆರೋಪಿ ಪತ್ತೆ ಮಾಡಿದರೂ ಏನು ಪ್ರಯೋಜನವಾಗಿರಲಿಲ್ಲ.ಇದನ್ನೂ ಓದಿ: ಕಾಶ್ಮೀರ್‌ದ ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಓರ್ವ ಸೇನಾಧಿಕಾರಿ ಹುತಾತ್ಮ: ಮೂವರಿಗೆ ಗಾಯ
5) ವಾರದ ಹಿಂದೆ ಜಯನಗರದಲ್ಲಿ ಸಂಪಿಗೆ ಥಿಯೇಟರ್ ಓನರ್ ಮನೆಯಲ್ಲಿ ದರೋಡೆಯಾಗಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳಿ ದಂಪತಿ ಮನೆಯಲ್ಲಿ ಬೇರೆ ಯಾರು ಇಲ್ಲದಾಗ ಮಾಲೀಕರನ್ನೇ ಕಟ್ಟಿಹಾಕಿ 38 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣ, 1.5 ಲಕ್ಷ ರೂ. ನಗದು ದರೋಡೆ ಮಾಡಿದ್ದರು. ಬಳಿಕ ಅವರನ್ನು ಬಂಧಿಸಲಾಯಿತು.
6) ವಿಜಯನಗರದಲ್ಲಿ ಜ್ಯುವೆಲ್ಲರಿ ಶಾಪ್ ಮಾಲೀಕರ ಮನೆ ದರೋಡೆ ಮಾಡಿ, ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜೊತೆ 40 ಲಕ್ಷ ರೂ. ನಗದು ದೋಚಿಕೊಂಡು ಹೋಗಿದ್ದರು. ಮನೆ ಮಾಲೀಕರು ಕುಟುಂಬ ಸಮೇತ ಗುಜರಾತ್‌ಗೆ ಹೋದಾಗ ಜ್ಯುವೆಲ್ಲರಿ ಶಾಪ್ ಜೊತೆ ಮನೆ ಕೆಲಸಕ್ಕೂ ಇದ್ದ ದಂಪತಿ ಈ ಕೃತ್ಯ ಎಸಗಿದ್ದಾರೆ. ನಾಲ್ಕು ಜನರ ನೇಪಾಳಿ ಗ್ಯಾಂಗ್‌ನಿಂದ ದರೋಡೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿರುವ ಮಾಹಿತಿಯಿದ್ದು, ಈಗಾಗಲೇ ಪೊಲೀಸ್ ತಂಡ ನೇಪಾಳಕ್ಕೆ ತೆರಳಿದೆ.
ಇದೀಗ ನೇಪಾಳಿ ಕಳ್ಳರನ್ನು ಹಿಡಿಯುವುದೇ ಒಂದು ದೊಡ್ಡ ಸವಾಲಾಗಿದ್ದು, ಒಮ್ಮೆ ದರೋಡೆ ಮಾಡಿ ಬೆಂಗಳೂರು ಬಿಟ್ಟರೆ ನೇಪಾಳಿ ಗ್ಯಾಂಗ್ ಹಿಡಿಯುವುದು ಕಷ್ಟದ ಕೆಲಸ. ಅವರನ್ನು ನೇಪಾಳ ಸೇರುವ ಮುನ್ನವೇ ಹಿಡಿಯಬೇಕಾಗಿದೆ. ರಾಜತಾಂತ್ರಿಕ ಸಮಸ್ಯೆಯಿಂದಾಗಿ ಅವರು ಒಮ್ಮೆ ನೇಪಾಳಕ್ಕೆ ಹೋದರೆ ಅವರನ್ನು ಮತ್ತೆ ಬಂಧಿಸುವುದು ಕಷ್ಟ. ಇದನ್ನೇ ಬಂಡವಾಳವಾಗಿಸಿಕೊಂಡು ನೇಪಾಳಿಗರು ಕಳ್ಳತನಕ್ಕಿಳಿದಿದ್ದಾರೆ. ಪೊಲೀಸರು ದೇಶದೊಳಗೆ ಬಂಧನ ಮಾಡಲು ಶತಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಬಂಧಿಸಿದರೂ ಜಾಮೀನು ಪಡೆದು ಮತ್ತೆ ಅದೇ ಕೆಲಸಕ್ಕಿಳಿಯುತ್ತಾರೆ. ಹೀಗಾಗಿ ನೇಪಾಳಿ ಕೆಲಸಗಾರರಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಂಜೀವ್ ಖನ್ನಾ ಪ್ರಮಾಣ ವಚನ ಸ್ವೀಕಾರ