ಕಠ್ಮಂಡು: ಅತ್ಯಾಚಾರ ಪ್ರಕರಣ ಹೆಚ್ಚಳಕ್ಕೆ ಸೆಕ್ಸ್ ವಿಡಿಯೋ ವೆಬ್ ಸೈಟ್‍ಗಳೇ ಕಾರಣ. ಹೀಗಾಗಿ ಅವುಗಳನ್ನು ಸ್ಥಗಿತಗೊಳಿಸಬೇಕು ಎಂದು ನೇಪಾಳದ ಮಾಹಿತಿ ಮತ್ತು ಸಂವಹನ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದೆ.
ಅಂದಹಾಗೆ ಇತ್ತೀಚಿನ ದಿನಗಳಲ್ಲಿ ನೇಪಾಳದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂತಹ ಹೊಸ ಪ್ರಸ್ತಾಪವೊಂದನ್ನು ಸರ್ಕಾರ ಸಲ್ಲಿಸಿದೆ.
Advertisement
ಪ್ರಕಟಣೆಯಲ್ಲಿ ಏನಿದೆ?
ಅತ್ಯಾಚಾರ ಪ್ರಕರಣ ಹೆಚ್ಚಳಕ್ಕೆ ಅಶ್ಲೀಲ ಮತ್ತು ಕಾಮ ಪ್ರಚೋದಕ ವಿಷಯಗಳ ಪ್ರಕಟಣೆ ಮತ್ತು ಪ್ರಸರಣವೇ ಕಾರಣ. ಕ್ರಿಮಿನಲ್ ಕೋಡ್ 2071ರ 121ನೇ ವಿಧಿ ಹಾಗೂ ಇತರ ಪ್ರಚಲಿತ ಕಾನೂನುಗಳು ಅಶ್ಲೀಲ ವಿಷಯಗಳನ್ನು ಉತ್ಪಾದಿಸುವುದು ಹಾಗೂ ಪ್ರಸರಣ ಮಾಡುವುದನ್ನು ನಿಷೇಧಿಸುತ್ತವೆ. ಈ ಕಾನೂನುಗಳ ಅನ್ವಯ ವಿದ್ಯುನ್ಮಾನ ಮಾಧ್ಯಮ ಹಾಗೂ ವೆಬ್ ಸೈಟ್‍ಗಳಲ್ಲಿ ಅತ್ಯಾಚಾರ ಪ್ರಚೋದಕ ವಿಷಯ ಬಿತ್ತರಿಸಿಸುವುದನ್ನು ಅಲಭ್ಯಗೊಳಿಸಬೇಕು ಎಂದು ತಿಳಿಸಲಾಗಿದೆ.
Advertisement
ಕಳೆದ ವಾರ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಹೊಸ ನಿರ್ಧಾರಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಇತ್ತೀಚೆಗೆ ನೇಪಾಳದ ದಕ್ಷಿಣ ಭಾಗದಲ್ಲಿ ನಡೆದ ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವುದಕ್ಕೆ ಸರ್ಕಾರದ ವೈಫಲ್ಯವೇ ಕಾರಣವೆಂದು ಸ್ಥಳೀಯರು ಕಟುವಾಗಿ ಟೀಕಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv