ಕಠ್ಮಂಡು: ಎದೆನೋವು ಕಾಣಿಸಿಕೊಂಡಿದ್ದರಿಂದ ನೇಪಾಳದ (Nepal) ಅಧ್ಯಕ್ಷ ರಾಮಚಂದ್ರ ಪೌಡೆಲ್ (RamChandra Paudel) ಅವರನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯ ಸಮಸ್ಯೆಯಿಂದ ಒಂದು ವಾರದಲ್ಲಿ ಎರಡನೇ ಬಾರಿಗೆ ಪೌಡೆಲ್ ಆಸ್ಪತ್ರೆ ಸೇರಿದ್ದಾರೆ.
ಅಧ್ಯಕ್ಷ ಪೌಡೆಲ್ ಅವರನ್ನು ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಗೆ (TUTH) ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ನಿಗಾ ವಹಿಸಿದ್ದಾರೆ ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ. ಇದನ್ನೂ ಓದಿ: ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!
Advertisement
Advertisement
ಎದೆನೋವಿನಿಂದಾಗಿ ಇಂದು ಬೆಳಗ್ಗೆ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಯ ಮನಮೋಹನ್ ಕಾರ್ಡಿಯೋಥೊರಾಸಿಕ್ ನಾಳೀಯ ಮತ್ತು ಕಸಿ ಕೇಂದ್ರದಲ್ಲಿ ರಾಮಚಂದ್ರ ಪೌಡೆಲ್ ಅವರನ್ನು ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಪ್ತ ಕಾರ್ಯದರ್ಶಿ ಚಿರಂಜೀಬಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
Advertisement
Advertisement
ಅನಾರೋಗ್ಯದಿಂದ ಬಳಲುತ್ತಿರುವ ಅಧ್ಯಕ್ಷರನ್ನು ಈ ಹಿಂದೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯಲ್ಲಿ ಚಿಕಿತ್ಸೆಗಾಗಿ ಶ್ರೀ ಏರ್‌ಲೈನ್ಸ್ ವಿಮಾನದಲ್ಲಿ ನವದೆಹಲಿಗೆ ಕರೆದೊಯ್ಯಲಾಗಿತ್ತು. ಅವರು ಚಿಕಿತ್ಸೆ ಪಡೆದು ಏಪ್ರಿಲ್ 30 ರಂದು ವಾಪಸ್ ಆಗಿದ್ದರು. ಇದನ್ನೂ ಓದಿ: ಬೃಹತ್ ಗಾತ್ರದ ಕಡಿದ ಮರ ತಬ್ಬಿಕೊಂಡು ಸೆಕ್ಸ್ – ವಿಕೃತ ಕಾಮಿ ಅರೆಸ್ಟ್