ಕಠ್ಮಂಡು: ನೇಪಾಳದ ಪೋಖ್ರಾ (Pokhara) ಪ್ರದೇಶದಲ್ಲಿ ಜನವರಿ 15 ರಂದು ಸಂಭವಿಸಿದ ಯೇತಿ ಏರ್‌ಲೈನ್ಸ್‌ನ (Yeti Airlines) ವಿಮಾನ ದುರಂತದಲ್ಲಿ ನಾಪತ್ತೆಯಾಗಿದ್ದ ಮತ್ತಿಬ್ಬರು ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿದೆ. ನಿರಂತರ ಕಾರ್ಯಚರಣೆ ಬಳಿಕ ಮೃತದೇಹಗಳ ಸಂಖ್ಯೆ ಈಗ 71ಕ್ಕೆ ಏರಿದೆ. ಮತ್ತೋರ್ವ ಪ್ರಯಾಣಿಕನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
Advertisement
ನೇಪಾಳದ ಪೋಖ್ರಾ (Pokhara) ವಿಮಾನ ನಿಲ್ದಾಣದ ಸಮೀಪ ನಡೆದ ಭೀಕರ ವಿಮಾನ ದುರಂತದಲ್ಲಿ ಯೇತಿ ಏರ್‌ಲೈನ್ಸ್‌ನ ATR 72 ವಿಮಾನದಲ್ಲಿದ್ದ 72 ಜನರ ಪೈಕಿ ಈವರೆಗೆ 71 ಜನ ಮೃತಪಟ್ಟಿದ್ದಾರೆ. ಎಲ್ಲ ಪ್ರಯಾಣಿಕರ ಮೃತ ದೇಹಗಳನ್ನು ವೈದ್ಯಕೀಯ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ (CAAN) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ವಿಮಾನದ ಎರಡು ಕಪ್ಪು ಪೆಟ್ಟಿಗೆಯೂ (Black Box) ಸಿಕ್ಕಿದ್ದು ದುರಂತದ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ.
Advertisement
Nepal plane crash near #PokharaAirport caught on camera from ground, these visuals show the plane engine caught fire ????, which may have been a bird hit after which it just went down tilted. #NepalPlaneCrash #YetiAirlines pic.twitter.com/m53qYgZnp9
— Blogging Freek (@JaiJais07887097) January 16, 2023
Advertisement
ಜನವರಿ 15 ರಂದು ಕಠ್ಮಾಂಡುವಿನಿಂದ ಪೋಖ್ರಾಗೆ ತೆರಳುತ್ತಿದ್ದ ಯೇತಿ ಏರ್‌ಲೈನ್ಸ್ ವಿಮಾನ ಪತನಗೊಂಡು 72 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ವಿಮಾನದಲ್ಲಿ ಐದು ಮಂದಿ ಭಾರತೀಯರು 10ಕ್ಕೂ ಅಧಿಕ ವಿದೇಶಿ ಪ್ರಯಾಣಿಕರು ಸೇರಿದಂತೆ 9 ಮಕ್ಕಳು ಕೂಡ ಇದ್ದರು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k