ಕಠ್ಮಂಡು: ಭಾರತದ UPI ವ್ಯವಸ್ಥೆಯನ್ನು ನೇಪಾಳ ಅಳವಡಿಸಿಕೊಳ್ಳುತ್ತಿದ್ದು, ಮೊದಲ ದೇಶ ಎನಿಸಿಕೊಳ್ಳುತ್ತಿದೆ. ಇದು ನೆರೆಯ ದೇಶದ ಡಿಜಿಟಲ್ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ತಿಳಿಸಿದೆ.
NPCI ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್(NIPL) NPCIಯ ಅಂತರಾಷ್ಟ್ರೀಯ ಅಂಗವಾಗಿದ್ದು, ನೇಪಾಳದಲ್ಲಿ ಸೇವೆಗಳನ್ನು ಒದಗಿಸಲು ಗೇಟ್‍ವೇ ಪೇಮೆಂಟ್ ಸರ್ವಿಸ್(GPS) ಹಾಗೂ ಮನಮ್ ಇನ್ಫೋಟೆಕ್‍ನೊಂದಿಗೆ ಕೈಜೋಡಿಸಿದೆ. ಇದನ್ನೂ ಓದಿ: ಸಂಜ್ಞಾ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ಅಭಿವೃದ್ಧಿ ಪಡಿಸಿದ 20ರ ಯುವತಿ
Advertisement
Advertisement
ಈ ಸಹಯೋಗದಿಂದ ನೇಪಾಳದಲ್ಲಿ ದೊಡ್ಡ ಡಿಜಿಟಲ್ ಸಾರ್ವಜನಿಕ ಸೇವೆ ಪೂರೈಕೆಯಾಗಲಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ(P2P) ಹಾಗೂ ವ್ಯಕ್ತಿಯಿಂದ ವ್ಯಾಪಾರಿ(P2M) ವಹಿವಾಟುಗಳನ್ನು ಉತ್ತೇಜಿಸುತ್ತದೆ ಎಂದು ಎನ್‍ಪಿಸಿಐ ತಿಳಿಸಿದೆ. ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗಿಲ್ಲ ಗಡಿರೇಖೆ – ಪಾಕ್ ಕ್ರಿಕೆಟ್ ಲೀಗ್‍ನಲ್ಲಿ ರಾರಾಜಿಸಿದ ಕೊಹ್ಲಿ ಪೋಸ್ಟರ್
Advertisement
ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಂಡು ನಗದು ವಹಿವಾಟುಗಳನ್ನು ಡಿಜಿಟಲೀಕರಣವಾಗಿ ಬದಲಾವಣೆ ಮಾಡುತ್ತಿರುವ ಮೊದಲ ದೇಶ ನೇಪಾಳ ಎಂದು ತಿಳಿಸಿದೆ.