ಕಿರುತೆರೆಯ ಜನಪ್ರಿಯ ಶೋ Weekend With Ramesh ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ಡಾಲಿ, ಡಾ.ಮಂಜುನಾಥ್, ಸಿಹಿ ಕಹಿ ಚಂದ್ರು, ಮಂಡ್ಯ ರಮೇಶ್ ಹೀಗೆ ಹಲವು ಸಾಧಕರ ಸಾಧನೆಯ ಕಥೆಯನ್ನ ಶೋ ಮೂಲಕ ಬಿಚ್ಚಿಟ್ಟಿದ್ದಾರೆ. ಇದೀಗ ಈ ವಾರಾಂತ್ಯ ಯಾವ ನಟ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಕ್ಕೆ ತೆರೆ ಬಿದ್ದಿದೆ.
ನಟ ರಮೇಶ್ ಅರವಿಂದ್ (Ramesh Aravind) ಅವರು ಕಳೆದ ನಾಲ್ಕು ಸೀಸನ್‌ಗಳನ್ನ ಅದ್ಭುತ ನಿರೂಪಣೆಯ ಮೂಲಕ ಮೋಡಿ ಮಾಡಿದ್ದಾರೆ. ನೂರಾರು ಸಾಧಕರ ಕಥೆಯನ್ನ ಸಾರಿ ಹೇಳಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಕೂಡ ಸದ್ದು ಮಾಡ್ತಿದೆ. ಈ ವಾರ ಲವ್ಲಿ ಸ್ಟಾರ್ ಪ್ರೇಮ್ (Lovely Star prem) ಅವರು ಸಾಧಕರ ಸೀಟ್‌ನ ಅಲಂಕರಿಸಿದ್ದಾರೆ. ಇದನ್ನೂ ಓದಿ:ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು
2004ರಲ್ಲಿ ‘ಪ್ರಾಣ’ (Prana Film) ಸಿನಿಮಾದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರ ಕೊಟ್ಟರು. ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಜೀರೋ ಟು ಹೀರೋ ಆಗಿ ಜನರ ಮನ ಗೆದ್ದರು. ನೆನಪಿರಲಿ, ಜೊತೆ ಜೊತೆಯಲಿ, ಚೌಕ, ಪಲ್ಲಕ್ಕಿ, ಚಾರ್‌ಮಿನಾರ್ ಹೀಗೆ ಸಾಕಷ್ಟು ಹಿಟ್ ಚಿತ್ರಗಳ ಮೂಲಕ ಸೈ ಎನಿಸಿಕೊಂಡರು.
ಸೋಲು- ಗೆಲುವು ಸಮಾನವಾಗಿ ಎದುರಿಸಿ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡರು. ಈ ವಾರಾಂತ್ಯ ತನ್ನ ಸಾಧನೆಯ ಕಥೆಯನ್ನ ಸಾಧಕರ ಸೀಟ್‌ನಲ್ಲಿ ಕುಳಿತು ಮುಕ್ತವಾಗಿ ನಟ ಪ್ರೇಮ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ.