ಸಿಗರೇಟ್ ಸೇದುವ ಚಟದಿಂದ ಏನೇನೆಲ್ಲ ಅನಾಹುತಗಳಾಗಬಹುದು ಎಂಬುವುದನ್ನು ಇಟ್ಟುಕೊಂಡು ಕಥಾಹಂದರ ಹೆಣೆಯಲಾಗಿರುವ ಚಿತ್ರ ಸ್ಮೋಕರ್ ಶಿವ. ಶಾರದಾ ಫಿಲಂಸ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಂ.ಶಿವ ಅವರು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.ಇದನ್ನೂ ಓದಿ: `ಮಹಾವತಾರ ಸಿನಿಮಾಟಿಕ್ ಯೂನಿವರ್ಸ್’ ಅನಾವರಣ – ಹೊಂಬಾಳೆ ಫಿಲ್ಮಸ್ ದಿಟ್ಟ ಹೆಜ್ಜೆ
ಇತ್ತೀಚೆಗೆ ಸ್ಮೋಕರ್ ಶಿವ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಈ ಹಿಂದೆ ಧ್ರುವ ಸರ್ಜಾ ಅವರು ಪೋಸ್ಟರ್ ರಿಲೀಸ್ ಮಾಡಿದ್ದರೆ, ಈಗ ನೆನಪಿರಲಿ ಪ್ರೇಮ್ ಅವರು ಮುಹೂರ್ತದಲ್ಲಿ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು. ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಅದ್ದೂರಿ ಚಲನಚಿತ್ರ ಇದಾಗಿದೆ. ಅಭಯ್ ಹರಿ ಅವರು ಸ್ಮೋಕರ್ ಶಿವ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಆಕ್ಟಿಂಗ್ ಪಾಠ ಕಲಿತು, ಸುಮಾರು ವರ್ಷಗಳಿಂದ ಕಿರುತೆರೆ, ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದ ಅಭಯ್ ಹರಿ ಅವರು ಇದೇ ಮೊದಲ ಬಾರಿಗೆ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಉದಯಲೀಲಾ ಚಿತ್ರದ ಛಾಯಾಗ್ರಾಹಕರು. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಇನ್ನೂ ಸಂಗೀತ ನಿರ್ದೇಶಕರು ಫೈನಲ್ ಆಗಿಲ್ಲ.
ನಾಯಕ ಶಿವ ಒಂಥರಾ ಚೈನ್ ಸ್ಮೋಕರ್. ಅಂತವನ ಬಾಳಲ್ಲಿ ಒಂದು ಸಿಗರೇಟ್ ಏನೆಲ್ಲ ಆಟವಾಡಿತು, ಆತನನ್ನು ಎಂಥ ಕಷ್ಟಕ್ಕೆ ದೂಡಿತು ಎಂಬುದನ್ನು ನಿರ್ದೇಶಕ ಶಿವ ಅವರು ಈ ಚಿತ್ರದ ಮೂಲಕ ಹೇಳಿದ್ದಾರೆ. ಚಿತ್ರದಲ್ಲಿ ವಿಲನ್ ಪಾತ್ರವೂ ಹೀರೋಗೆ ಸಮನಾಗಿ ಬರುತ್ತದೆ. ಆ ಪಾತ್ರಕ್ಕೆ ಹಾಗೂ ಸ್ನೇಹಿತನ ಪಾತ್ರಕ್ಕೆ ನಟ ರವಿಶಂಕರ್ ಹಾಗೂ ಸೋನು ಸೂದ್ ಅವರನ್ನು ಅಪ್ರೋಚ್ ಮಾಡಿದ್ದೇವೆ. ಇನ್ನೂ ಮಾತುಕತೆ ನಡೆಯುತ್ತಿದೆ. ಇನ್ನೂ ಬೆಂಗಳೂರು, ಮಂಗಳೂರು ಅಥವಾ ಕುಂದಾಪುರ, ಬೀದರ್ ಕೋಟೆ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸುವ ಪ್ಲ್ಯಾನ್ ಇದೆ. ಹೇಗಾದರೂ ಮಾಡಿ ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬ ಯೋಜನೆ ನಮಗಿದೆ ಎಂದು ಚಿತ್ರತಂಡ ತಿಳಿಸಿದೆ.ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಪ್ರಶಾಂತ್ ನೀಲ್ ʻರಾವಣಂʼ


 
		 
		 
		 
		 
		 
		 
		 
		 
		