ಬೆಂಗಳೂರು: ಮಗಳ ಪ್ರೇಮ ವಿವಾಹಕ್ಕೆ (Love Marriage) ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ನಗರದ (Nelamangala City) ಸರ್ಕಾರಿ ಆಸ್ಪತ್ರೆ ಎದುರಿನ ಪಾರ್ಕ್‌ನಲ್ಲಿ ನಡೆದಿದೆ.
ನೆಲಮಂಗಲ ತಾಲ್ಲೂಕಿನ ಅಂಜನಾ ನಗರದ 45 ವರ್ಷದ ಮಹಿಳೆ ಲಕ್ಷ್ಮಮ್ಮ ನೇಣಿಗೆ ಶರಣಾದ ಮಹಿಳೆ. ಇದನ್ನೂ ಓದಿ: ಬುರ್ಖಾ ವಿದ್ಯಾರ್ಥಿನಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ: ಪ್ರತಾಪ್ ಸಿಂಹ
ಇತ್ತೀಚೆಗಷ್ಟೇ ತನ್ನ ಮಗಳು ಪ್ರೇಮ ವಿವಾಹವಾಗಿ ಮನೆಬಿಟ್ಟು ಹೋಗಿದ್ದಳು. ಇದರಿಂದ ಮನನೊಂದಿದ್ದ ಲಕ್ಷ್ಮಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆಲಮಂಗಲ ಟೌನ್ ಪೊಲೀಸ್ ಠಾಣಾ (Nelamangala Town Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Election Results – ಟ್ರೆಂಡ್ ಬೇಗನೇ ಗೊತ್ತಾದ್ರೂ ತಡವಾಗಲಿದೆ ಅಧಿಕೃತ ಫಲಿತಾಂಶ