ನೆಲಮಂಗಲ: ಡ್ಯಾನ್ಸ್ ಮಾಡುವ ವೇಳೆ ಮಂಗಳಮುಖಿಯರ ಮೇಲೆ ಹಣ ಎಸೆದು ದುರ್ವತನೆ ಮಾಡಿದ್ದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೈಲಪ್ಪ ನಾನು ಯಾವುದೇ ದುರುದ್ದೇಶದಿಂದ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಕುಲುವನಹಳ್ಳಿ ಬಳಿ ಸಂತೋಷಿ ಮಾತಾಜಿ ದೇಗುಲದಲ್ಲಿ ನಡೆದಿದ್ದ ಮಂಗಳ ಮುಖಿಯರ ಪೂಜೆ ವೇಳೆ ನೃತ್ಯ ಮಾಡುತ್ತಾ ಅವರ ಮೇಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೈಲಪ್ಪ ಹಣದ ನೋಟುಗಳನ್ನು ಎಸೆದಿದ್ದರು.
Advertisement
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟೀಕೆ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೈಲಪ್ಪ ನಾನು ಯಾವುದೇ ದುರುದ್ದೇಶದಿಂದ ಮಾಡಿಲ್ಲ. ನಾನು ಯಾವುದೇ ಕಾರಣಕ್ಕೂ ಅಸಭ್ಯ ವರ್ತನೆ ಮಾಡುವವನಲ್ಲ. ಈ ವೇಳೆ ಮಂಗಳಮುಖಿಯರು ಹಣ ಎಸೆಯುವಂತೆ ಹೇಳಿದ್ದರು. ಹೀಗಾಗಿ ಅವರ ಪದ್ದತಿಯಂತೆ ನಾನು ಹಣ ಎಸೆದಿದ್ದೆ ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೈಲಪ್ಪ ಸ್ಪಷ್ಟನೆ ನೀಡಿದ್ದಾರೆ.
Advertisement
ನನ್ನ ರಾಜಕೀಯ ಬೆಳವಣಿಗೆ ಸಹಿಸಲಾರದೆ ಕೆಲ ಕಿಡಿಗೇಡಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಹೀಗಾಗಿ ನಾನು ಯಾವುದೇ ತಪ್ಪು ಮಾಡುವ ವ್ಯಕ್ತಿ ಅಲ್ಲ. ನಾನು ಎಲ್ಲರನ್ನೂ ಗೌರವಿಸುವ ವ್ಯಕ್ತಿ ಈ ವಿಡಿಯೋದಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ.