ನೆಲಮಂಗಲ: ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಾಚೀನ ಪಳೆಯುಳಿಕೆಗಳ ಪತ್ತೆಹಚ್ಚಿ ಪುಸ್ತಕ ರೂಪದಲ್ಲಿ ತಂದ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಇತಿಹಾಸ ತಜ್ಞ (Historian) ಡಾ.ಹೆಚ್.ಎಸ್ ಗೋಪಾಲ ರಾವ್ (HS Gopal Rao) ನಿಧನರಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ಅರಿಶಿನಕುಂಟೆ (Arasinakunte) ಮನೆಯಲ್ಲಿ 78 ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಚೋಳರ ಕಾಲದ ಸಾಕಷ್ಟು ದೇವಾಲಯದ ಪಳೆಯುಳಿಕೆಗಳನ್ನು ಪತ್ತೆ ಮಾಡಿ ಸಂಶೋಧನೆ ನಡೆಸಿದ್ದು, ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ರಚಿತಾ ರಾಮ್- ಫ್ಯಾನ್ಸ್ ಬೇಸರ
ಈಗಿನ ಭಿನ್ನಮಂಗಲವು 1110ರಲ್ಲಿ ವಿನ್ನಮಂಗಲಂ ಆಗಿತ್ತು. ವಿನ್ನಮಂಗಲಂದಲ್ಲಿ ಚೋಳರ ಕೊನೆಯ ಸಂತತಿ ರಾಜ ಚೋಳರ ದೊರೆ ಶ್ರೀ ಮುಕ್ತಿನಾಥೇಶ್ವರ ದೇವಾಲಯವನ್ನು ನಿರ್ಮಿಸಿದ್ದರು. ಅಳಿದು ಹೋಗುವ ಸ್ಥಿತಿಯಲ್ಲಿದ್ದ ದೇವಾಲಯಗಳ ಕಡೆ ಆಸಕ್ತಿ ಹೊರಳಿಸಿ, ಅಲ್ಲಿದ್ದ ಒಂದು ಶಾಸನದ ಮೂಲಕ ಜನರಿಗೆ ಮಾಹಿತಿಯನ್ನು ತಿಳಿಸಿಕೊಟ್ಟರು.
ಶಿವಗಂಗೆ ಬೆಟ್ಟದ ಮೇಲೆ ನಾಟ್ಯರಾಣಿ ಶಾಂತಲೆ ಸಲ್ಲೇಖನ ವ್ರತದಿಂದ ಮೃತಪಟ್ಟಳು ಎಂಬ ವಿಚಾರವಾಗಿ ಸುಧೀರ್ಘ ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿದ್ದರು. ಶ್ರವಣ ಬೆಳಗೊಳದಲ್ಲಿರುವ (ShravanaBelagola) ಶಾಸನ ಹಾಗೂ ಶಿವಗಂಗೆ ಬೆಟ್ಟದ ಸ್ಥಳೀಯ ಜಾಗಗಳ ಆಧಾರದ ಮೇಲೆ ನಾಟ್ಯರಾಣಿ ಶಾಂತಲೆ ಸಲ್ಲೇಖನ ವ್ರತದಿಂದ ಮೃತಪಟ್ಟಳು. ಈ ವಿಚಾರವಾಗಿ ತಾರ್ಕಿಕ ಅಂತ್ಯವನ್ನು ಹೊರಜಗತ್ತಿಗೆ ನೀಡಲು ಹೊರಟಿದ್ದವರು ಮಂಗಳವಾರ (ಅ.1) ನಿಧನರಾದರು.
ಕರ್ನಾಟಕ ರಾಜ್ಯ (Karnataka) ಹಾಗೂ ನೆಲಮಂಗಲಕ್ಕೆ ತಮ್ಮ ಸಾಹಿತ್ಯ ಮತ್ತು ಸಂಶೋಧನಾತ್ಮಕ ವಿಚಾರಗಳನ್ನು ಒದಗಿಸುತ್ತಿದ್ದವರಲ್ಲಿ ಪ್ರಮುಖರು. ಇವರನ್ನು ಕಳೆದುಕೊಂಡ ನೆಲಮಂಗಲ ತಾಲೂಕಿನ ಸಾಹಿತಿಗಳು ಮತ್ತು ಸಂಶೋಧನಾ ಆಸಕ್ತರಿಗೆ ತೀವ್ರ ನೋವನ್ನುಂಟು ಮಾಡಿದೆ.ಇದನ್ನೂ ಓದಿ: ಟೆಸ್ಟ್‌ನಲ್ಲಿ ಟಿ20 ಆಟ – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಗೆದ್ದ ಭಾರತ