ನೆಲಮಂಗಲ: ಮೆಚ್ಚಿನ ಶಿಕ್ಷಕ ವರ್ಗವಾಗಿದ್ದಕ್ಕೆ ಮಕ್ಕಳು ಕಣ್ಣೀರಿಟ್ಟ ಘಟನೆ ತಾಲೂಕಿನಲ್ಲಿ ನಡೆದಿದೆ. ಮಕ್ಕಳ ಪ್ರೀತಿಯನ್ನು ಕಂಡು ಶಿಕ್ಷಕ ಭಾವುಕರಾಗಿದ್ದಾರೆ.
Advertisement
ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಸಲುವಾಗಿ ಶಿಕ್ಷಕ ಗಂಗಮಲ್ಲಯ್ಯ ಅವರು ಬೇರೊಂದು ಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಆದರೆ ಶಾಲೆಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಶಿಕ್ಷಕರು ವರ್ಗಾವಣೆಯಾಗಿರುವ ಸುದ್ದಿ ಕೇಳಿ ಮಕ್ಕಳು ಕಣ್ಣೀರು ಹಾಕಿದರು. ತಮ್ಮ ಮೆಚ್ಚಿನ ಶಿಕ್ಷಕ ವರ್ಗಾವಣೆ ಸುದ್ದಿ ಕೇಳಿ ಶಾಲೆಯ 125 ಮಕ್ಕಳು ಕಣ್ಣೀರಿಟ್ಟು, ಶಿಕ್ಷಕರ ಕಾಲಿಗೆರಗಿ ಆಶೀರ್ವಾದ ಪಡೆದ ಘಟನೆಗೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಲಕ್ಕೂರು ಸರ್ಕಾರಿ ಶಾಲೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!
Advertisement
ಲಕ್ಕೂರು ಸರ್ಕಾರಿ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಗಂಗಮಲ್ಲಯ್ಯ, ವಯಸ್ಸಾದ ತಂದೆ-ತಾಯಿ ನೋಡಿಕೊಳ್ಳುವ ಕಾರಣಕ್ಕೆ ತಮ್ಮ ಸ್ವಗ್ರಾಮದ ಬಳಿಯ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ವರ್ಗಾವಣೆಯ ವಿಷಯ ಶಾಲಾ ಮಕ್ಕಳಿಗೆ ಗೊತ್ತಿರಲಿಲ್ಲ. ಮಕ್ಕಳಿಗೆ ಗೊತ್ತಾಗದಂತೆ ಶಾಲೆಯ ಶಿಕ್ಷಕರೇ ಗಂಗಮಲ್ಲಯ್ಯ ಅವರಿಗೆ ಬೀಳ್ಕೊಡುಗೆ ನೀಡಿದ್ದರು. ಇದನ್ನೂ ಓದಿ: 1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ
Advertisement
Advertisement
ತಮ್ಮ ಮೆಚ್ಚಿನ ಶಿಕ್ಷಕರ ವರ್ಗಾವಣೆ ಸುದ್ದಿ ತಿಳಿದ ಮಕ್ಕಳು ಭಾವುಕರಾದರು. ಶಿಕ್ಷಕರು ನೋಡದ ಹೊರತು ಊಟ ಮಾಡುವುದಿಲ್ಲವೆಂದು ಹಠ ಮಾಡಿದರು. ಮಕ್ಕಳ ಹಠಕ್ಕೆ ಮಣಿದ ಪೋಷಕರು ವರ್ಗಾವಣೆಯಾದ ಶಿಕ್ಷಕರಿಗೆ ಮನವಿ ಮಾಡಿ ಮಕ್ಕಳನ್ನು ಭೇಟಿ ಮಾಡುವಂತೆ ವಿನಂತಿಸಿಕೊಂಡರು. ನಂತರ ಶಾಲೆಗೆ ಭೇಟಿ ನೀಡಿದ ಗಂಗಮಲ್ಲಯ್ಯ ಅವರನ್ನು ಸುತ್ತುವರಿದ ಮಕ್ಕಳು, ಸರ್… ನಮ್ಮ ಶಾಲೆ ಬಿಟ್ಟು ಹೋಗ್ಬೇಡಿ ಎಂದು ಕಣ್ಣೀರು ಹಾಕಿದರು. ಮಕ್ಕಳ ಮುಗ್ಧ ಪ್ರೀತಿಗೆ ಶಿಕ್ಷಕ ಗಂಗಮಲ್ಲಯ್ಯ ಸಹ ಭಾವುಕರಾದರು.