ನೆಲಮಂಗಲ: ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಸ್ಪಂದಿಸಿ ಮನೆಯಲ್ಲಿ ಜೀವನ ಕಳೆಯುತ್ತಿರುವ ಬಡ ಹಾಗೂ ಕೂಲಿ ಕಾರ್ಮಿಕರ ಹಸಿವನ್ನ ನೀಗಿಸುವ ನಿಟ್ಟಿನಲ್ಲಿ ಮಾಜಿ ಸೈನಿಕನ ಹೃದಯ ಮಿಡಿದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಿನ್ನಮಂಗಲ ನಿವಾಸಿ ಮೂರ್ತಿ, ನಮ್ಮ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇದೀಗ ದೇಶಾದ್ಯಂತ ಹರಡಿರುವ ಮಹಾಮಾರಿ ಕೊರೊನಾ ವೈರಸ್ ಹೋಗಲಾಡಿಸಲು ನೀಡಿರುವ ಲಾಕ್ ಡೌನ್ ಹಿನ್ನೆಲೆ, ಮಾಜಿ ಸೈನಿಕ ಮಿಲ್ಟ್ರೀ ಮೂರ್ತಿ ಹಾಗೂ ಕುಟುಂಬ ದಿನಸಿ ವಿತರಣೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.
Advertisement
Advertisement
ನೆಲಮಂಗಲ ತಾಲೂಕಿನ ಬಿನ್ನಮಂಗಲ ಗ್ರಾಮದ ನೂರಾರು ಬಡವರಿಗೆ ಒಂದು ವಾರಕ್ಕೆ ಬೇಕಾಗುವಂತಹ ದಿನಸಿ ಪದಾರ್ಥಗಳನ್ನ ವಿತರಣೆ ಮಾಡಿ, ಕೊರೊನಾ ಹೋರಾಟಕ್ಕೆ ಮಾಜಿ ಸೈನಿಕ ಕೈಜೋಡಿಸಿದ್ದಾರೆ. ಒಟ್ಟಾರೆ ನಮ್ಮ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ಇಂತಹ ವೇಳೆ ಜನರಿಗೆ ದಿನಸಿ ವಿತರಣೆ ಮಾಡಿ ಮಾನವೀಯತೆ ಜೊತೆ ಸಾರ್ಥಕತೆಯನ್ನ ಮೆರೆದಿದ್ದಾರೆ. ಮಾಜಿ ಸೈನಿಕನ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.