ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಎರಡು ತಿಂಗಳ ಪಡಿತರವನ್ನು ವಿತರಣೆ ಮಾಡುತ್ತಿದೆ. ನೆಲಮಂಗಲದ ತಲಕಾಡು ಸುಬ್ಬರಾಯರ ಬೀದಿಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಧೂಳು ಮತ್ತು ಹುಳು ಮಿಶ್ರಿತ ಗೋಧಿಯನ್ನು ವಿತರಿಸಲಾಗಿದೆ.
Advertisement
ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಗೋಧಿಯನ್ನು ನೋಡಿದಾಗ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ನೀಡುವದಾದ್ರೆ ಒಳ್ಳೆಯ ಗೋಧಿ ನೀಡಿ ಇಲ್ಲವಾದ್ರೆ ಬೇಡ. ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೇ ಮನೆಯಲ್ಲಿ ಕೂತಿದ್ದೇವೆ. ಸರ್ಕಾರ ದಿನಸಿ ನೀಡುತ್ತಿದೆ ಎಂದು ರಾತ್ರಿಯೆಲ್ಲ ಸರತಿಯಲ್ಲಿ ನಿಂತಿದ್ದೇವೆ. ಆದ್ರೆ ಹುಳು ಮಿಶ್ರಿತ ಗೋಧಿ ನೀಡಿದ್ದಾರೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಮಾತ್ರ ಸರ್ಕಾರ ನೀಡಿರುವುದನ್ನು ನಾವು ವಿತರಿಸುತ್ತಿದ್ದೇವೆ. ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ನ್ಯಾಯಾಬೆಲೆ ಅಂಗಡಿಯವರು ಪ್ರತಿಯೊಬ್ಬರಿಂದ 40 ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.