ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ- ಬರೋಬ್ಬರಿ 850ಕ್ಕೂ ಹೆಚ್ಚು ಮೊಬೈಲ್ ಫೋನ್ ವಶಕ್ಕೆ

Public TV
1 Min Read
NML PHONE 4

ನೆಲಮಂಗಲ(ಬೆಂಗಳೂರು): ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಹಳೆಯ ಪ್ರಕರಣಕ್ಕೆ ಮಾದನಾಯಕನಹಳ್ಳಿ ಪೊಲೀಸರು ನಾಂದಿಯಾಡಿದ್ದಾರೆ.

NML PHONE 3

ಬೆಂಗಳೂರು ಹೊರವಲಯ ನೆಲಮಂಗಲ ಉಪವಿಭಾಗ ಮಾದನಾಯಕನಹಳ್ಳಿ ಪೊಲೀಸರು ಬರೋಬ್ಬರಿ 60 ಲಕ್ಷ ಮೌಲ್ಯದ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಅಲ್ಲದೆ 6 ಮಂದಿಯನ್ನು ಬಂಧಿಸಿದ್ದಾರೆ. ಯೋಗೇಶ್, ಸಂದೀಪ್, ವಾಸೀಂ, ಹರಿ, ರವಿಕಿರಣ್ ಭವೇಶ್ ಜೈನ್ ರನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಇದನ್ನೂ ಓದಿ: UAE T20 ಲೀಗ್‍ನ ಕ್ರಿಕೆಟ್ ತಂಡ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

NML PHONE

ಈ ಆರೋಪಿಗಳು ಶೋಕಿಗಾಗಿ ಹಾಗೂ ಪ್ರೇಯಸಿಯನ್ನ ಖುಷಿಪಡಿಸಲು ಈ ಖದೀಮರು ಕಳ್ಳತನ ಮಾರ್ಗ ಹಿಡಿದಿದ್ದರಂತೆ. ಅಲ್ಲದೆ ಕದ್ದ ಮೊಬೈಲ್ ಗಳನ್ನ ಸಾಕಷ್ಟು ತಿಂಗಳ ಕಾಲ ಮಾರಾಟ ಮಾಡದೆ ಒಂದೆಡೆ ಶೇಕರಿಸಿ ನಂತರ ಪೊಲೀಸರ ಕಣ್ ತಪ್ಪಿಸಿ ಮಾರಾಟ ಮಾಡುವ ವೇಳೆ ಒಂದು ಮೊಬೈಲ್ ಸಿಮ್ ನ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರು ಹಲಾಲ್ ಪ್ರಮಾಣೀಕೃತ ಮಾಂಸ ಮಾತ್ರ ಸೇವಿಸಬೇಕೆಂದ ಬಿಸಿಸಿಐ

NML PHONE 2

ಮಾದನಾಯಕನಹಳ್ಳಿ ಸಿಪಿಐ ಮಂಜುನಾಥ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಎಸ್‍ಪಿ ಕೋನವಂಶಿ ಕೃಷ್ಣ, ಎಎಸ್ ಪ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ ಪಿ ಜಗದೀಶ್ ಮಾದನಾಯಕನಹಳ್ಳಿ ಪೊಲೀಸರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *