ಬೆಂಗಳೂರು: ಲಾರಿ ಚಾಲಕರೇ ಹುಷಾರ್, ಎಚ್ಚರ ತಪ್ಪಿ ರಸ್ತೆಯಲ್ಲಿ ಅತೀ ವೇಗವಾಗಿ ಚಲಿಸಿದರೆ, ಚಮಕ್ ಕೊಟ್ಟರೆ ಗೂಸಾ ಬೀಳುತ್ತವೆ. ಹೌದು, ನೆಲಮಂಗಲದ ಬಿನ್ನಮಂಗಲ ಬಳಿ ಶನಿವಾರ ರಾತ್ರಿ ಸವಾರನಿಗೆ ಚಮಕ್ ನೀಡಲು ಹೋಗಿ ಲಾರಿ ಚಾಲಕನೊಬ್ಬ ಗೂಸಾ ತಿಂದಿದ್ದಾನೆ.
ನೆಲಮಂಗಲದಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಬೈಕ್ ಸವಾರನಿಗೆ, ಅತಿ ವೇಗದ ಚಾಲನೆಯಿಂದ ಲಾರಿ ಚಾಲಕ ಚಮಕ್ ಕೊಟ್ಟನಂತೆ. ಚಾಲಕ ವರ್ತನೆ ಕಂಡ ಸ್ಥಳೀಯರು ಲಾರಿಯನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಚಾಲಕನನ್ನು ಹೊರಗೆಳೆದ ಯುವಕರ ಗುಂಪು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಲಾರಿ ಬಿಟ್ಟು ಕೆಳಗೆ ಬರುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದಿದ್ದಾಗ, ಆತನ ಬಲಬದಿಗೆ ಇದ್ದ ಗಾಜು ಒಡೆದು ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಚಾಲಕನನ್ನು ಹೊರಗೆಳೆದು ಗೂಸಾ ಕೊಟ್ಟಿದ್ದಾರೆ. ಮತ್ತೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಲಾರಿ ಚಾಲಕನ ನಿರ್ಲಕ್ಷ್ಯದಿಂದ ಕಲಬುರಗಿಯಲ್ಲಿ ಇದೇ ತಿಂಗಳ 11ರಂದು ಭಾರೀ ಅನಾಹುತವೇ ನಡೆದಿತ್ತು. ಬಸ್‍ಗಾಗಿ ಕಾಯುತ್ತ ರಸ್ತೆ ಪಕ್ಕದಲ್ಲಿ ನಿಂತಿದ್ದ ಆರು ಜನರ ಮೇಲೆ ಲಾರಿ ಹರಿದು, ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಒಬ್ಬನ ಎರಡೂ ಕಾಲುಗಳು ಕತ್ತರಿಸಿದ್ದವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv