ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾದ್ರೆ, ಇಲ್ಲಿಯ ವೃದ್ಧ ದಂಪತಿ ಪುತ್ರ ಸೇನೆಗೆ ಅಂತಾ ಹೋದವ 24 ವರ್ಷಗಳಾದ್ರೂ ಮರಳಿ ಬಂದಿಲ್ಲ. ಇಂದು ಸಹ ಮಗ ಬರ್ತಾನೆ ಅಂತಾ ವೃದ್ಧ ದಂಪತಿ ಪುತ್ರನ ಫೋಟೋ ಹಿಡಿದು ಮನೆಯ ಮುಂದೆ ಕಾಯುತ್ತಾ ಕುಳಿತಿದ್ದಾರೆ.
ನಗರದ ಹೊರವಲಯದ ನೆಲಮಂಗಲ ತಾಲೂಕಿನ ಇಸ್ಲಾಂಪುರದ ನಿವಾಸಿಯಾಗಿರುವ ಮಹಮ್ಮದ್ ಕಲಂದರ್ ಮತ್ತು ಮೆಹರುನ್ನಿಸಾ ವೃದ್ಧ ದಂಪತಿ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ. ವೃದ್ಧ ದಂಪತಿಯ ಪುತ್ರ ಮಹಮ್ಮದ್ ರಫೀಕ್ 24 ವರ್ಷಗಳಿಂದ ಎಲ್ಲಿದ್ದಾರೆ ಎಂಬುವುದು ಯಾರಿಗೂ ಗೊತ್ತಿಲ್ಲ. ಅಪ್ಪಟ ದೇಶಪ್ರೇಮಿಯಾಗಿದ್ದ, ಮಹಮ್ಮದ್ ರಫೀಕ್ ಸೇನೆಗೆ ಸೇರಿದ ಆರಂಭದ ನಾಲ್ಕು ವರ್ಷಕ್ಕೆ ಪೋಷಕರಿಗೆ ಪತ್ರ ಬರೆಯುತ್ತಿದ್ದರು. ರಜೆ ಪಡೆದುಕೊಂಡು ಗ್ರಾಮಕ್ಕೂ ಬಂದಿದ್ದರು. ಒಂದು ಬಾರಿಗೆ ಊರಿಗೆ ಬಂದ ಮಗ ಮತ್ತೆ ಸೇನೆಗೆ ಹೋದವ ಬಂದಿಲ್ಲ ಎಂದು ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.
Advertisement
Advertisement
ನಾಗಾಲ್ಯಾಂಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮಹಮ್ಮದ್ ರಫೀಕ್ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ವೃದ್ಧ ದಂಪತಿ ಪುತ್ರನನ್ನ ಹುಡುಕಿಕೊಡಿ ಎಂದು ಸೇನೆಯಲ್ಲಿ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಮಗನಿಗೆ ಏನು ಆಗಿಲ್ಲ, ಇಂದಲ್ಲ ನಾಳೆ ಬಂದೇ ಬರುತ್ತಾನೆ ಎಂದು ಪುತ್ರ ಬರೆದಿರುವ ಪತ್ರ ಮತ್ತು ಫೋಟೋ ಹಿಡಿದುಕೊಂಡು ಬಾಗಿಲ ಬಳಿಯೇ ದಂಪತಿ ನಿಂತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv