ನೆಲಮಂಗಲ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಾಲೇ ಅನೇಕ ಕೂಲಿ ಕಾರ್ಮಿಕರು ನಿರಾಶ್ರಿತರು ಊಟವಿಲ್ಲದೆ ಅಸಹಾಯಕರಾಗಿದ್ದಾರೆ. ಅಲ್ಲದೆ ಅನೇಕ ವರ್ಗದ ಕೆಲಸಗಾರರು ಕೂಡ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದ್ದಂತು ನಿಜ. ಈ ಕೊರೊನಾ ಎಫೆಕ್ಟ್ ನಮ್ಮ ಸ್ಯಾಂಡಲ್‍ವುಡ್ ಮಂದಿಗೂ ತಟ್ಟದೇ ಬಿಟ್ಟಿಲ್ಲ.
Advertisement
ಕನ್ನಡ ಚಿತ್ರರಂಗದ ಕಿರಿಯ ಕಲಾವಿದರು ಕೂಡ ಕೊರೊನಾದಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತವರಿಗೆ ಕನ್ನಡ ಚಿತ್ರರಂಗದ ಹಿರಿಯ ಜೀವ ನಟಿ ಡಾ.ಲೀಲಾಲವತಿ ಹಾಗೂ ಪುತ್ರ ವಿನೋದ್ ರಾಜ್ ಸಹಾಯ ಹಸ್ತವನ್ನು ಚಾಚಿದ್ದಾರೆ.
Advertisement
ಇಂದು ಬೆಂಗಳೂರಿನ ಸುಮ್ಮನಹಳ್ಳಿಯ ಜೂನಿಯರ್ ಕಲಾವಿದ ಸಂಘಕ್ಕೆ ದಿನಿನಿತ್ಯ ಬಳಕೆ ಮಾಡುವ ದಿನಸಿ ಪದಾರ್ಥಗಳನ್ನು ಕೊಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ತೋಟದಲ್ಲಿ ಬೆಳೆದ ಪದಾರ್ಥಗಳ ಜೊತೆಗೆ ನೆಲಮಂಗಲ ದಿನಸಿ ಅಂಗಡಿಯಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡ ವಿನೋದ್ ರಾಜ್, ನೂರಾರು ಜನರಿಗೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ.
Advertisement
Advertisement
ನಾಲ್ಕು ದಿನದ ಹಿಂದೆ ನಟ ವಿನೋದ್ ರಾಜ್ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಗ್ರಾಮದಲ್ಲಿ ಕೊರೋನ ವೈರಸ್ ಭೀತಿಯ ಪರಿಣಾಮ ಸ್ವತಃ ಯಾರಿಂದಲೂ ಸಹಾಯ ಪಡೆಯದೆ ತಾವೇ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿ ಮಾದರಿಯಾಗಿದ್ದರು. ಇಂದು ಅಮ್ಮ ಮಗ ಇಬ್ಬರು ಚಿತ್ರರಂಗದ ಕಿರಿಯ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿ ತಮ್ಮ ಹೃದಯ ಶ್ರೀಮಂತಿಕೆಗೆ ಪಾತ್ರರಾಗಿದ್ದಾರೆ. ಕಿರಿಯ ಕಲಾವಿದರು ಕೂಡ ಇವರ ಕಾರ್ಯಕ್ಕೆ ಚಿರರುಣಿಯಾಗಿ ಸಂತಸವನ್ನ ವ್ಯಕ್ತಪಡಿಸಿದ್ದಾರೆ.