Bengaluru RuralDistrictsKarnatakaLatestMain Post

ಡಾ.ಜಿ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗಬೇಕು: ಜೆಡಿಎಸ್ ಶಾಸಕ

ನೆಲಮಂಗಲ: ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬಡವರ ಪರವಾಗಿರುವ ನಾಯಕ ಡಾ.ಜಿ. ಪರಮೇಶ್ವರ್ ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಜೆಡಿಎಸ್ ಶಾಸಕ ಡಾ.ಕೆ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

ನೆಲಮಂಗಲ ತಾಲೂಕಿನ ಟಿ.ಬೇಗೂರು ಸಿದ್ಧಾರ್ಥ ಕಾಲೇಜಿನಲ್ಲಿ ಮಾತನಾಡಿ, ಇದು ನನ್ನ ವೈಯಕ್ತಿಕ ಬಯಕೆ. ಪರಮೇಶ್ವರ್ ಅವರು 120 ವಿದ್ಯಾಸಂಸ್ಥೆಗಳ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಅವರು ಸಿಎಂ ಆಗಬೇಕು ಎಂದಿದ್ದಾರೆ.

ಮುಂದಿನ ದಿನದಲ್ಲಿ ದಲಿತ ಸಿಎಂ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸಿಎಂ ಪದದ ಹಿಂದಿನ ದಲಿತ ಪದ ನಾನು ಇಷ್ಟ ಪಡಲ್ಲ. ಡಾ.ಜಿ. ಪರಮೇಶ್ವರ್ ಶಾಸಕರಾಗಿ ಗೃಹ ಮಂತ್ರಿಯಾಗಿ ಹಾಗೂ ನಾನಾ ಇಲಾಖೆಯ ಸಚಿವರಾಗಿದ್ದರು. ಅಲ್ಲದೆ ಡಾ.ಜಿ. ಪರಮೇಶ್ವರ್ ರವರಿಗೆ ಸಾಕಷ್ಟು ಅನುಭವ ಇದೆ. ಜನರ ಸೇವೆ ಮಾಡೋ ವ್ಯಕ್ತಿಯಾಗಿದ್ದಾರೆ ಎಂದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

ಸಾಕಷ್ಟು ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ ಕೀರ್ತಿ ಇದೆ. ಅಲ್ಲದೆ ರಾಜ್ಯದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಮುಂದೆ ಸಿಎಂ ಆಗಿ ಕೆಲಸ ಮಾಡುವ ಅನುಭವ ಇದೆ. ಅವರು ಮುಖ್ಯಮಂತ್ರಿ ಆದರೆ ಉತ್ತಮ ಸೇವೆ ಮಾಡುತ್ತಾರೆ ಎಂದು ನೆಲಮಂಗಲ ಜೆಡಿಎಸ್ ಶಾಸಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Back to top button