ಬೆಂಗಳೂರು: ಮಾಚನಹಳ್ಳಿ ಗ್ರಾಮದಲ್ಲಿ 8 ಎಕರೆ ಭೂಮಿ ಕಬಳಿಸಿದ್ದ ಆರೋಪದಲ್ಲಿ ನೆಲಮಂಗಲ (Nelamangala) ಹೆಡ್‌ಕಾನ್‌ಸ್ಟೆಬಲ್ ಅಮಾನತಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಾಚನಹಳ್ಳಿ ಗ್ರಾಮದಲ್ಲಿ 8 ಎಕರೆ ಭೂಮಿ ಅಕ್ರಮವಾಗಿ ಕಬಳಿಸಿದ್ದ ಹೆಡ್‌ಕಾನ್‌ಸ್ಟೆಬಲ್ ಗಿರಿಜೇಶ್ ಸೇರಿ ಆರು ಮಂದಿ ವಿರುದ್ಧ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾಗಿ 20 ದಿನಗಳಾದರೂ ಈ ಪ್ರಕರಣ ಆರೋಪಿಗಳ ಬಂಧನವಾಗಿರಲಿಲ್ಲ. ಸರ್ಕಾರಿ ಸೇವೆಯಲ್ಲಿದ್ದು ಅಕ್ರಮ ಎಸಗಿರುವ ಹಿನ್ನೆಲೆ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಕ್ಷಣಗಣನೆ – ವಿಜಯಪುರದ ಗೋಲಗುಂಬಜ್‌ನಲ್ಲಿ ತುಂಬಿ ತುಳುಕುತ್ತಿರುವ ಜನ
ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇತ್ತ ನೆಲಮಂಗಲ ಸಬ್‌ರಿಜಿಸ್ಟ್ರಾರ್ D.P ಸತೀಶ್ ಕುಮಾರ್ ಪ್ರಕರಣ ದಾಖಲಾದ ಬಳಿಕ ಇದುವರೆಗೂ ಕಚೇರಿಗೆ ಹಾಜರಾಗಿಲ್ಲ. ಈ ನಡುವೆ ಸಾರ್ವಜನಿಕ ವಲಯದಲ್ಲಿ ನಾಪತ್ತೆ ಬಗ್ಗೆ ಜನರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೆಲಸಕ್ಕೆ ಹಾಜರಾಗದೇ ನಾಪತ್ತೆರೆಂಬ ಮಾತು ಕೇಳಿಬರುತ್ತಿದೆ. ಪೊಲೀಸ್ ಜೊತೆ ಸೇರಿ ಅಕ್ರಮ ಎಸಗಿದ ಆರೋಪ ಹೊತ್ತಿರುವ ಈ ಇಬ್ಬರು FIR ದಾಖಲಾದಾಗಿನಿಂದಲೂ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಆಚರಣೆಗೆ ಮಂಡ್ಯ ಜಿಲ್ಲೆ ಸಜ್ಜು – ಕಾವೇರಿ ತೀರದಲ್ಲಿ ನಿಷೇಧಾಜ್ಞೆ

