ನೆಲಮಂಗಲ: ಕಳೆದ ವಾರವಷ್ಟೇ ಪಬ್ಲಿಕ್ ಟಿವಿ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಶ್ರೀನಿವಾಸಪುರ ಗ್ರಾಮದ ಕೆರೆಯಲ್ಲಿನ ಅಕ್ರಮ ಫಿಲ್ಟರ್ ಮರಳು ದಂಧೆಯ ಕರಾಳ ಸುದ್ದಿಯನ್ನು ಬಿತ್ತರಿಸಿತ್ತು. ಅಲ್ಲದೆ ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಕೂಡ ಅಂದೇ ಸ್ಥಳಕ್ಕೆ ಭೇಟಿ ನೀಡಿ ಇಡೀ ಅಕ್ರಮವನ್ನು ಕಣ್ಣಾರೆ ಕಂಡು ಸ್ಥಳದಲ್ಲಿದ್ದ ಫಿಲ್ಟರ್ ಮರಳು ಮಾಡುವ ಯಂತ್ರ, ಟೆಂಟ್ ಗಳನ್ನು ನೆಲಸಮ ಮಾಡಿ ಖಡಕ್ ಕ್ರಮ ಕೈಗೊಂಡಿದ್ದರು.
Advertisement
ಆದರೆ ಇಲ್ಲಿ ಫಿಲ್ಟರ್ ಮರಳು ದಂಧೆಕೋರರು ಬಿಟ್ಟು ಹೋಗಿರುವ ಉಸುಕು ಮಣ್ಣಿನಿಂದ ಇದೀಗ ಇಲ್ಲಿನ ಜಾನುವಾರಗಳು ಸಂಕಷ್ಟಕ್ಕೀಡಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಉಸುಕು ಮರಳಿನಲ್ಲಿ ಹಸುವೊಂದು ಸಿಲುಕಿ ಹೊರ ಬರಲಾಗದೆ ಇಡೀ ದಿನ ಮೂಕ ರೋಧನೆ ಅನುಭವಿಸಿದೆ. ಗ್ರಾಮಸ್ಥರು ಹರಸಾಹಸ ಪಟ್ಟರೂ ಪ್ರಯೋಜನವಾಗದೆ ನಂತರ ಜೆಸಿಬಿ ಮುಖಾಂತರ ಹಸುವನ್ನು ಮಣ್ಣಿನಿಂದ ಹೊರತೆಗೆದು ರಕ್ಷಿಸಲಾಯಿತು. ಇದನ್ನೂ ಓದಿ: ಮನೆ, ಕಟ್ಟಡ ಕಟ್ಟುವ ಮುನ್ನ ಎಚ್ಚರ – ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ಫಿಲ್ಟರ್ ದಂಧೆ
Advertisement
ಇದೇ ಭಾಗದಲ್ಲಿ ತಮ್ಮ ಜಾನುವಾರುಗಳನ್ನು ಬಿಡಲು ರೈತರು ಆತಂಕದಲ್ಲಿದ್ದಾರೆ. ಫಿಲ್ಟರ್ ಮರಳು ದಂಧೆಕೋರರ ಅಟ್ಟಹಾಸ ಕೇವಲ ಮನುಷ್ಯರ ಮೇಲಲ್ಲದೆ ಪ್ರಾಣಿಗಳು ಮೇಲೆ ಬೀರಿರುವುದು ದುರಂತವೇ ಇದಕ್ಕೆಲ್ಲ ನೆಲಮಂಗಲ ಗ್ರಾಮಾಂತರ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಅಕ್ರಮ ಮರಳು ದಂಧೆಗೆ ಬ್ರೇಕ್