ನೆಲಮಂಗಲ: ರಸ್ತೆಯ ಲೈಟ್ ಕಂಬ ವಿಚಾರದಲ್ಲಿ ದಾಯಾದಿಗಳು ದೊಣ್ಣೆಯಿಂದ ಬಡಿದಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗಂಡ್ರುಗೊಳಿಪುರ ಗ್ರಾಮದಲ್ಲಿ ನಡೆದಿದೆ.
ಹೊಲದಲ್ಲಿ ಅಟ್ಟಾಡಿಸಿ ದಮ್ಮಯ್ಯ ಅಂದರೂ ಬಿಡದ ದಾಯಾದಿ ಕಲಹದ ಬಿರುಕು ಇದಾಗಿದೆ. ಮುದುಕನನ್ನ ಅಟ್ಟಾಡಿಸಿ ಹಲ್ಲೆ ನಡೆಸಿದ ಮತ್ತೊಂದು ಗ್ಯಾಂಗ್‍ನ ಎಲ್ಲಾ ದೃಶ್ಯಗಳನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಲೋಕೇಶ್ ಹಾಗೂ ಶಿವಣ್ಣ ಎಂಬವರ ಮೇಲೆ ಎದುರಾಳಿ ಗ್ಯಾಂಗ್ ದಾಳಿ ಮಾಡಿ ಬುರುಡೆಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದೆ. ಆನಂದಮೂರ್ತಿ, ಹನುಮಂತರಾಜು, ಮಾರುತಿ, ಪುಟ್ಟತಾಯಮ್ಮ, ರಾಗಿಣಿ ಇನ್ನಿತರಿಂದ ಹಲ್ಲೆ ಆರೋಪವನ್ನ ಗಾಯಾಳು ಕುಟುಂಬಸ್ಥರು ಮಾಡಿದ್ದಾರೆ.
Advertisement
ಈ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ಕೂಡ ದಾಖಲಾಗಿದೆ. ಎದುರಾಳಿ ಕುಟುಂಬದಲ್ಲಿ ಪೊಲೀಸ್ ಅಧಿಕಾರಿ ಇರುವುದರಿಂದ ನಮಗೆ ರಕ್ಷಣೆ ಇಲ್ಲ ಎಂದು ಹಲ್ಲೆಗೊಳಗಾದ ಕುಟುಂಬದವರು ಆರೋಪ ಮಾಡಿದ್ದು, ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ.