ನೆಲಮಂಗಲ: ಪೌರತ್ವ ಕಾಯ್ದೆಯ ವಿರುದ್ಧ ಮುಸ್ಲಿಂ ಸಂಘಟನೆಗಳ ವಿರೋಧ ಮುಂದುವರೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಕುಣಿಗಲ್ ಬೈಪಾಸ್ ಸಮೀಪದ ಇಂದು ಮುಸ್ಲಿಂ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತಾನಾಡಿದ ಮಂಗಳೂರು ಮೂಲದ ನಜ್ಮಾ ಎಂಬವರು, ಸಂಸದ ತೇಜಸ್ವಿ ಸೂರ್ಯ ಹೇಳಿಕೆಯನ್ನು ಖಂಡಿಸಿದರು. ಮಿಸ್ಟರ್ ತೇಜಸ್ವಿ ಸೂರ್ಯ ನಾನು ಪಂಕ್ಚರ್ ಹಾಕುವ ತಂದೆಯ ಮಗಳು ಎಂದು ಹೇಳುತ್ತಿದ್ದೇನೆ. ನಮ್ಮ ಎದೆ ಸೀಳಿದರೆ ನಿಜವಾದ ದೇಶಪ್ರೇಮ, ಪ್ರೀತಿ ಕಾಣುತ್ತದೆ, ನಿಮ್ಮ 56 ಇಂಚಿನ ಎದೆಯನ್ನು ಬಗೆದರೆ ಕೇವಲ ರಾಜಕೀಯ ದಳ್ಳುರಿ ಕಾಣುತ್ತದೆ ಎಂದು ಕಿಡಿಕಾರಿದರು.
Advertisement
Advertisement
ನಿಮ್ಮ ರಾಜಕೀಯ ಕಾರಣಗಳಿಂದ ಹಿಂದೂ-ಮುಸ್ಲಿಮರನ್ನ ಕಿತ್ತಾಡುವಂತೆ ಮಾಡುತ್ತಿದ್ದೀರಾ. ನಾವು ಈ ದೇಶದ ಮೂಲ ನಿವಾಸಿಗಳು. ಆದರೆ ನಮ್ಮದು ದ್ರಾವಿಡ ಮತ್ತು ದೇಶಾಭಿಮಾನದ ಎದೆ ಎಂದು ವೇದಿಕೆಯ ಮೇಲೆ ಸಂಸದ ತೇಜಸ್ವಿ ಸೂರ್ಯಗೆ ತೀವ್ರ ತರಾಟೆಗೆ ತೆಗೆದುಕೊಂಡರು.
Advertisement
ಈ ಸಭೆಯಲ್ಲಿ ತಾಲೂಕಿನ ಸಾವಿರಾರು ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗಾಗಿ ಡಿಆರ್ ತುಕಡಿ, 1 ಕೆ.ಎಸ್.ಆರ್.ಪಿ ತಂಡವನ್ನು ನಿಯೋಜನೆ ಮಾಡಲಾಗಿತ್ತು.