ವಿಜಯಪುರ: ಡಿ.22 ರಂದು ನೆಲಮಂಗಲದಲ್ಲಿ ನಡೆದಿದ್ದ ಕಾರು ಅಪಘಾತದಲ್ಲಿ (Nelamangala Car Accident) ಮಗ, ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಉದ್ಯಮಿ ಚಂದ್ರಮ್ ಅವರ ತಂದೆ ಸಹ ನಿಧನರಾಗಿದ್ದಾರೆ.
ಈರಗೊಂಡ ಏಗಪ್ಪಗೊಳ (80) ನಿಧನರಾದವರು. ಅವರು ಕುಟುಂಬ ಸದಸ್ಯರ ಸಾವಿನಿಂದ ಆಘಾತಕ್ಕೊಳಕ್ಕಾಗಿದ್ದರು. ಅವರು ಶನಿವಾರ ಸಂಜೆ ಮಹಾರಾಷ್ಟ್ರದ ಸಾಂಗ್ಲಿಯ ಮೊರಬಗಿ ಗ್ರಾಮದಲ್ಲಿ ನಿಧನರಾಗಿದ್ದಾರೆ.
Advertisement
Advertisement
ನೆಲಮಂಗಲದಲ್ಲಿ ಕಾರಿನ ಮೇಲೆ ಕಂಟೈನರ್ ಬಿದ್ದು ಏಗಪ್ಪಗೊಳ ಅವರ ಮಗ ಚಂದ್ರಮ್ ಸೇರಿದಂತೆ ಕುಟುಂಬದ ಸದಸ್ಯರಾದ ಗೌರಾಬಾಯಿ, ದೀಕ್ಷಾ, ಧ್ಯಾನ್, ವಿಜಯಲಕ್ಷ್ಮಿ ಹಾಗೂ ಆರ್ಯ ಸಾವನ್ನಪ್ಪಿದ್ದರು. ಇದಾದ ಬಳಿಕ ಅನಾರೋಗ್ಯದಲ್ಲಿದ್ದ ಅವರು ತೀವ್ರ ನೊಂದುಕೊಂಡಿದ್ದರು.