ನೆಲಮಂಗಲ: ನಗರದ ವಧುವಿನ ಕಿಡ್ನಾಪ್ ಪ್ರಕರಣ ಕುರಿತು ನನ್ನ ತಂಗಿ ಗಂಗಾಧರಯ್ಯನ ಜೊತೆ ಇದ್ದ ಜಾಗದ ಬಗ್ಗೆ ಮಾಹಿತಿ ನೀಡಿದ್ದು, ನಾನು ನನ್ನ ತಂದೆ ಅಲ್ಲಿಗೆ ಹೋದೆವು ಎಂದು ವಧು ಜಲಜಾ ಸಹೋದರ ಹೇಳಿದ್ದಾರೆ.
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆ ಸಂಬಧ ಡಾಬಸ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ನಾವು ಅಲ್ಲಿಗೆ ಹೋದ ಬಳಿಕ ನನ್ನ ತಂಗಿ ನಾವು ಇದ್ದ ಕಡೆ ಓಡಿ ಬಂದಳು. ನಮ್ಮ ತಂದೆ ಮಗಳನ್ನು ನೋಡಿದ ಕೂಡಲೇ ಕುಸಿದು ಬಿದ್ದರು. ಈಗ ಅವರು ಆಸ್ಪತ್ರೆಯ ಐಸಿಯುನಲ್ಲಿದ್ದಾರೆ. ನಮ್ಮ ಊರಿನಲ್ಲಿ ಇವರದ್ದು ಒಂದು ಗ್ಯಾಂಗ್ ಇದೆ. ಹಣವಂತರ ಮಕ್ಕಳನ್ನು ನೋಡೋದು ದುಡ್ಡು ಕೀಳೊದು ಎಂದಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ
Advertisement
Advertisement
ನಾನು ಅವನಿಗೆ ಆತ್ಮೀಯ ಅವನು ಸರಿ ಇಲ್ಲ. ನಾವು ನಮ್ಮ ತಂಗಿಯನ್ನು ಕಿಡ್ನಾಪ್ ಮಾಡಿಲ್ಲ. ಗಂಗಾಧರಯ್ಯನಿಗೆ 40 ವರ್ಷ ವಯಸ್ಸಾಗಿದ್ದು, ಕಂಡ ಕಂಡ ಹೆಣ್ಣು ಮಕ್ಕಳನ್ನು ಪಟಾಯಿಸೋದು ದುಡ್ಡು ಮಾಡೋದು ಅವನ ಕೆಲಸವಾಗಿದೆ. ನನ್ಮ ತಂಗಿ ತಾನಾಗಿಯೇ ನಮ್ಮ ಬಳಿ ಬಂದಿರೋದು. ಆತನಿಗೆ ಸರಿಯಾದ ಶಿಕ್ಷೆಯಾಗಬೇಕು ಆತ ಆಡಿರೋದು ನಾಟಕ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ