ನೆಲಮಂಗಲ: ಪ್ರೀತಿ (Love) ತಿರಸ್ಕರಿಸಿದ ಯುವತಿ ಹತ್ಯೆಗೆ ಸ್ಕೆಚ್ ಹಾಕಿ ಹಾಡಹಗಲೇ ಗನ್ ಹಿಡಿದು ಓಡಾಡಿದ ಯುವಕನನ್ನು ನೆಲಮಂಗಲ (Nelamangala) ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ (Bihar) ಮೂಲದ ಶುಭಂ ಎಂದು ಗುರುತಿಸಲಾಗಿದೆ. ಪಿಜ್ಜಾ ಡಿಲೆವೆರಿ ಬಾಯ್ ಆಗಿದ್ದ ಆರೋಪಿ, ಮೂರು ವರ್ಷದಿಂದ ಪ್ರೀತಿಸುವಂತೆ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳ ಹಿಂದೆ ಬಿದ್ದಿದ್ದ. ಆದರೆ ಯುವತಿ ಆತನ ಪ್ರೀತಿ ನಿರಾಕರಿಸಿದ್ದಳು. ಆಕೆ ಬೇರೆಯವನನ್ನ ಪ್ರೀತಿ ಮಾಡ್ತಿದ್ದಾಳೆ ಎಂದುಕೊಂಡಿದ್ದ ಆರೋಪಿ, ಆನ್‌ಲೈನ್‌ನಲ್ಲಿ ಗನ್ ಖರೀದಿಸಿ, ಕೊಲೆಗೆ ಮುಂದಾಗಿದ್ದ. ಆತ ಗನ್ ಹಿಡಿದು ಮಲ್ಲಾಪುರ ಗ್ರಾಮದ ರಸ್ತೆಯಲ್ಲಿ ಓಡಾಡಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ಯುವಕನನ್ನು ಥಳಿಸಿ ವಿಷ ಕುಡಿಸಿ ಕೊಂದ ದುಷ್ಕರ್ಮಿಗಳು
ಯುವತಿ ಕಾಲೇಜ್‌ಗೆ ಹಾಲ್ ಟಿಕೆಟ್ ಪಡೆಯಲು ಊಬರ್‌ನಲ್ಲಿ ಬಂದಿದ್ದಳು. ಈ ವೇಳೆ ಊಬರ್ ಡ್ರೈವರ್‌ಗೆ ಯುವತಿ, ಶುಭಂ ಬಗ್ಗೆ ಹೇಳಿದ್ದಾಳೆ. ಊಬರ್ ಚಾಲಕ ಶಿವಕುಮಾರ್ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಬಳಿಯಿದ್ದ ಕಂಟ್ರಿಮೇಡ್ ರಿವಾಲ್ವರ್ ಹಾಗೂ ನಾಲ್ಕು ಜೀವಂತ ಗುಂಡನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಚಿಕನ್ ಬೇಯಿಸಲು ಹಚ್ಚಿದ ಒಲೆಯಿಂದ ರೂಮ್ ತುಂಬಾ ಆವರಿಸಿದ ಹೊಗೆ – ಓರ್ವ ಸಾವು, 6 ಮಂದಿ ಅಸ್ವಸ್ಥ

