ಬೆಂಗಳೂರು: ಹೊಲದಲ್ಲಿ ಕೆಲಸ ಮಾಡುವ ಒಂಟಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಳ್ಳನೊಬ್ಬ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನೆಲಮಂಗಲ ಸಮೀಪದ ಮುಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಪ್ಪೇನಹಳ್ಳಿ ಗ್ರಾಮದ ಹೊನ್ನಮ್ಮ (65) ಕಳ್ಳರಿಂದ ಹಲ್ಲೆಗೊಳಗಾಗಿ, ಓಲೆಗಳನ್ನು ಕಳೆದುಕೊಂಡ ವೃದ್ಧೆ. ಹೊನ್ನಮ್ಮ ಅವರು ಇಂದು ತಮ್ಮ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮುಸುಕುಧಾರಿ ವ್ಯಕ್ತಿಯೊಬ್ಬ ಹೊನ್ನಮ್ಮ ಅವರ ಮೇಲೆ ದಾಳಿ ಮಾಡಿದ್ದಾನೆ. ನಂತರ ವೃದ್ಧೆಯ ಬಳಿ ಇದ್ದ ಓಲೆಗಳನ್ನು ನೋಡಿದ ಕಳ್ಳ, ಬಲವಾಗಿ ಕಿತ್ತುಕೊಂಡಿದ್ದಾನೆ. ಪರಿಣಾಮ ವೃದ್ಧೆಯ ಕಿವಿ ಹರಿದಿದ್ದು, ರಕ್ತಸ್ರಾವಕ್ಕೆ ಒಳಗಾಗಿದ್ದಾರೆ.
ಓಲೆಗಳು ತನ್ನ ಕೈ ಸೇರುತ್ತಿದ್ದಂತೆ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಪ್ಪೇನಹಳ್ಳಿ ಗ್ರಾಮದ ಪಕ್ಕದ ಹಳ್ಳಿಯ ಮಂಜುನಾಥ್ ಎಂಬವನೇ ಕೃತ್ಯ ಎಸಗಿದ್ದಾನೆ ಎಂದು ವೃದ್ಧೆ ಆರೋಪಿಸಿದ್ದಾರೆ. ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv