ಬೆಂಗಳೂರು: ರಸ್ತೆ ಅಪಘಾತದಲ್ಲಿ ಪವಾಡ ರೀತಿಯಲ್ಲಿ ಮಾವ ಹಾಗೂ ಸೊಸೆ ಬದುಕುಳಿದ ಭಾರೀ ಅನಾಹುತವೊಂದು ನಗರ ಹೊರ ವಲಯದ ನೆಲಮಂಗಲದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಕಾಳಿಪಾಳ್ಯ ನಿವಾಸಿಗಳಾದ ಪಲ್ಲವಿ(21) ಹಾಗೂ ರೇವಣ್ಣ(65) ಅದೃಷ್ಟವಶಾತ್ ಬದುಕುಳಿದವರು. ಆದರೆ ಪಲ್ಲವಿ ಅವರ ಬಲಗಾಲು ಮುರಿದಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ವಿವರ: ಬಾಳೆ ಕಾಯಿ ಮಾರಾಟ ಮಾಡಲು ಪಲ್ಲವಿ ಹಾಗೂ ಮಾವ ರೇವಣ್ಣ ಟಿವಿಎಸ್ ಎಕ್ಸ್‌ಎಲ್ ಸ್ಕೂಟರ್ ನಲ್ಲಿ ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಅವರ ಮೇಲೆ ಬಂದಿತ್ತು. ಪ್ರಾಣ ಉಳಿಸಿಕೊಳ್ಳಲು ಮುಂದಾದ ಇಬ್ಬರೂ ತಕ್ಷಣವೇ ಸ್ಕೂಟರ್ ಬಿಟ್ಟು ರಸ್ತೆ ಬದಿಗೆ ಜಿಗಿದಿದ್ದಾರೆ. ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಆದರೆ ಸ್ಕೂಟರ್ ಮೇಲೆ ಲಾರಿ ಹರಿದು ಸಂಪೂರ್ಣ ಜಖಂಗೊಂಡಿದೆ.
ಸ್ಕೂಟರ್ ನಿಂದ ಜಿಗಿದ ಪರಿಣಾಮ ಪಲ್ಲವಿ ಅವರ ಬಲಗಾಲು ಮುರಿದಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನೆಲಮಂಗಲ ಸಂಚಾರ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews