ನೆಲಮಂಗಲ | ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು, 4 ಲಕ್ಷ ನಷ್ಟ

Public TV
1 Min Read
Railway Track

ನೆಲಮಂಗಲ: ರೈಲಿಗೆ ಸಿಲುಕಿ 24 ಮೇಕೆಗಳು ಭೀಕರವಾಗಿ ಸಾವನ್ನಪ್ಪಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಚಿಕ್ಕಮಾರನಹಳ್ಳಿ (Chikkamaranahalli) ಬಳಿ ನಡೆದಿದೆ.ಇದನ್ನೂ ಓದಿ: ಶನಿವಾರ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಚಿಕ್ಕಮಾರನಹಳ್ಳಿ ಗ್ರಾಮದ ರೈತ ವೆಂಕಟಪ್ಪ ಅವರಿಗೆ ಸೇರಿದ್ದ 24 ಮೇಕೆಗಳು ಇಂದು (ಡಿ.27) ಸಂಜೆ ಸಾವನ್ನಪ್ಪಿವೆ.

ಸಂಜೆ ರೈಲೊಂದು ಹಾಸನದಿಂದ (Hassan) ಬೆಂಗಳೂರಿಗೆ (Bengaluru) ಬರುತ್ತಿತ್ತು. ಇದೇ ವೇಳೆ ಮಳೆ ಬಂದಿದ್ದಕ್ಕೆ ರೈಲು ಹಳಿಯ ಮೇಲೆ ಮೇಕೆಗಳ ದಂಡು ಓಡಿ ಹೋಗಿದೆ. ಪರಿಣಾಮ ಬರುತ್ತಿದ್ದ ರೈಲಿಗೆ ಸಿಲುಕಿ 4 ಲಕ್ಷ ರೂ. ಮೌಲ್ಯದ 24 ಮೇಕೆಗಳು ದಾರುಣವಾಗಿ ಸಾವನ್ನಪ್ಪಿವೆ. ಮೇಕೆಗಳ ಸಾವಿನಿಂದಾಗಿ ರೈತ ವೆಂಕಟಪ್ಪ ಕಂಗಾಲಾಗಿದ್ದಾರೆ.ಇದನ್ನೂ ಓದಿ: ಮುರುಡೇಶ್ವರ| ಸಾಹಸ ಕ್ರೀಡೆ ನಿರ್ಬಂಧ ತೆರವಿಗೆ ನಾನಾ ವಿಘ್ನ – ಪ್ರವಾಸಿಗರಿಗೆ ನಿರಾಸೆ

Share This Article