ಯಾದಗಿರಿ: ಕರ್ತವ್ಯಕ್ಕೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ನಿಯಂತ್ರಣಾಧಿಕಾರಿಯೊಬ್ಬರು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.
ಆನಂದ ಪಟುವಾರಿ ಹಲ್ಲೆ ಮಾಡಿದ ಬಸ್ ನಿಯಂತ್ರಣ ಅಧಿಕಾರಿ. ಹಲ್ಲೆಗೆ ಒಳಗಾದ ಚಾಲಕ ರಾಘವೇಂದ್ರ ಗಂಭೀರವಾಗಿ ಗಾಯಗೊಂಡಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ.
Advertisement
ಆಗಿದ್ದೇನು?:
ಚಾಲಕ ರಾಘವೇಂದ್ರ ಯಾದಗಿರಿಯಿಂದ ವಿಜಯಪುರಕ್ಕೆ ತೆರಳುವ ಬಸ್ ಚಾಲಕರಾಗಿದ್ದಾರೆ. ಅವರು ಎಂದಿನಂತೆ ಶುಕ್ರವಾರ ಬೆಳಗ್ಗೆ 6:15ಕ್ಕೆ ಬಸ್ ನಿಲ್ದಾಣದಿಂದ ಹೊರಡುವುದಾಗಿ ಅನುಮತಿ ಪಡೆದಿದ್ದರು. ಆದರೆ ನಿಯಂತ್ರಣ ಅಧಿಕಾರಿ ಆನಂದ 15 ನಿಮಿಷ ತಡವಾಗಿ ಹೋಗುವಂತೆ ಹೇಳಿದ್ದಾರೆ. ಇದಕ್ಕೆ ರಾಘವೇಂದ್ರ ಒಪ್ಪದ ಕಾರಣ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ನಿಯಂತ್ರಣಾಧಿಕಾರಿ ರಾಘವೇಂದ್ರ ಅವರ ಕೆನ್ನೆಗೆ ಹೊಡೆದು, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
Advertisement
Advertisement
ನನ್ನ ಸಮಯಕ್ಕೆ ಸರಿಯಾಗಿ ಬಸ್ ಚಾಲನೆ ಮಾಡಲು ಹೊರಟಿದ್ದೆ. ಈ ವೇಳೆ ಬಂದ ಆನಂದ ಅವರು ನನ್ನನ್ನು ತಡೆದು, 15 ನಿಮಿಷ ತಡವಾಗಿ ಹೊರಡು ಅಂತ ಹೇಳಿದರು. ಸರ್ ನನಗೆ 6:15ಕ್ಕೆ ಹೊರಡುವಂತೆ ಡಿಸ್‍ಪ್ಯಾಚ್ ಲೆಟರ್ ನಲ್ಲಿ ತಿಳಿಸಲಾಗಿದೆ ಅಂತ ತಿಳಿಸಿದೆ. ಇದರಿಂದಾಗಿ ಕೋಪಗೊಂಡು ನನಗೆ ಬುದ್ಧಿ ಹೇಳುತ್ತೀಯಾ ಅಂತ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಚಾಲಕ ರಾಘವೇಂದ್ರ ಆರೋಪಿಸಿದ್ದಾರೆ. ಈಗ ಹೊಡೆದಾಟ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv