ರಾಮನಗರ: ಸಚಿವ ಚಲುವರಾಯಸ್ವಾಮಿಗೆ (Chaluvarayaswamy) ಕಪಾಳಮೋಕ್ಷ ಆಗಿದ್ಯಾ? ಮಾಜಿ ಎಂಎಲ್‌ಸಿ ಕೀಲಾರ ಜಯರಾಂ ಹಲ್ಲೆ ಮಾಡಿದ್ರಾ? ಟ್ರಾನ್ಸ್‌ಫರ್ ವಿಚಾರದಲ್ಲಿ ಗಲಾಟೆ ಆಯ್ತಾ? ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾಡಿದ ಆರೋಪ ಇಂತಹ ಅನುಮಾನಗಳಿಗೆ ಕಾರಣ ಆಗಿದೆ.
ಹುಣಸೂರಿನ (Hunsur) ಹೋಟೆಲ್‌ವೊಂದರಲ್ಲಿ ಸಚಿವ ಚಲುವರಾಯಸ್ವಾಮಿ ಮತ್ತು ಮಾಜಿ ಎಂಎಲ್‌ಸಿ ಕಿಲಾರ ಜಯರಾಮ್ ನಡುವೆ ವರ್ಗಾವಣೆ ಹಣಕಾಸಿನ ವಿಚಾರದಲ್ಲಿ ಕಿತ್ತಾಟ ನಡೆದಿತ್ತು. ಈ ವೇಳೆ ಕೃಷಿ ಸಚಿವರ ಮೇಲೆ ಮಾಜಿ ಎಂಎಲ್‌ಸಿ ಹಲ್ಲೆ ಮಾಡಿದ್ದರು ಎಂಬ ವಿಚಾರವನ್ನು ಕುಮಾರಸ್ವಾಮಿ ಬಹಿರಂಗ ಮಾಡಿದ್ದರು. ಸಚಿವರ ಮೇಲೆ ಹಲ್ಲೆ ನಡೆಯುವಂತಹ ಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿದೆ ಎಂದು ಲೇವಡಿ ಮಾಡಿದ್ದರು. ಇದನ್ನೂ ಓದಿ: Tumakuru| ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ: ಹೆತ್ತ ತಾಯಿ ಅಳಲು
ಆದರೆ ಈ ಆರೋಪವನ್ನು ಸಚಿವ ಚಲುವರಾಯಸ್ವಾಮಿ ಅಲ್ಲಗಳೆದಿದ್ದಾರೆ. ಅವರು ಚಪಲಕ್ಕೆ ಏನೇನು ಹೇಳುತ್ತಾರೋ ಗೊತ್ತಿಲ್ಲ. ಹೆಚ್‌ಡಿಕೆಗೆ ಮಗನ ಚುನಾವಣೆಗಿಂತ ಚಲುವರಾಯಸ್ವಾಮಿ ವಿಚಾರ ಮುಖ್ಯವಾಗಿದೆ. ನನಗೂ, ಜಯರಾಂಗೂ ಯಾವುದೇ ವರ್ಗಾವಣೆ, ಹಣದ ವ್ಯವಹಾರ ನಡೆದಿಲ್ಲ. ನಮ್ಮ ಸರ್ಕಾರ ಬಂದಾಗಿಂದ ಅವರು ಯಾವುದೇ ಸಹಕಾರ ನಮಗೆ ಕೊಟ್ಟಿಲ್ಲ. ಎಲ್ಲರದ್ದು ನನ್ನ ಜೇಬಲ್ಲಿ ಇದೆ ಎನ್ನುತ್ತಾರೆ. ಒಂದೂವರೆ ವರ್ಷದಿಂದ ಇನ್ನೂ ಬಿಡುಗಡೆ ಮಾಡಿಲ್ಲ. ಬರೀ ಈ ರೀತಿಯ ಹೇಳಿಕೆಯಲ್ಲೇ ಹೆಚ್‌ಡಿಕೆ ಕಾಲಹರಣ ಮಾಡುತ್ತಿದ್ದಾರೆ. ನಮ್ಮ ಹೆಸರು ಹೇಳದಿದ್ದರೆ ಅವರಿಗೆ ನಿದ್ದೆ ಬರಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾರವಾರ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಟ್ರ್ಯಾಕರ್ ಅಳವಡಿಸಿದ ರಣ ಹದ್ದು ಪತ್ತೆ!