ಬೆಂಗಳೂರು: ನಾನು ದೆಹಲಿಗೆ ಹೋಗೋ ಪ್ರಮೇಯ ಬಂದಿಲ್ಲ. ಅಷ್ಟಕ್ಕೂ ನನಗೂ ದೆಹಲಿಗೂ ಟಚ್ ಇಲ್ಲ ಎಂದು ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾರೋ ದೆಹಲಿ ಯಾತ್ರೆ ಹೋಗ್ತಾರೆ, ಹೈಕಮಾಂಡ್ ನಾಯಕರು ಸಿಗ್ತಾರಾ?. ನಮ್ಮ ವರಿಷ್ಠರು ಬಹಳ ಬ್ಯುಸಿ ಇರುತ್ತಾರೆ. ಲೋಕಸಭೆ ಚುನಾವಣೆಗೆ ನಿಲ್ಲು ಅಂತಾ ಯಡಿಯೂರಪ್ಪ ಹೇಳಿದಾಗ ನಾನು ಓಡಿ ಹೋಗಿದ್ದೆ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನ ಮಗನಿಗೆ ಟಿಕೆಟ್ ಕೊಡುವಂತೆ ಕೇಳಿದ್ದೇನೆ. ಸರ್ವೇ ಮಾಡಲಿ, ಯಾರಿಗೇ ಟಿಕೆಟ್ ಕೊಟ್ರೂ ಪರವಾಗಿಲ್ಲ ಎಂದು ಶಾಸಕರು ತಿಳಿಸಿದರು. ಇದನ್ನೂ ಓದಿ: NIAಯಿಂದ ಬಂಧನಕ್ಕೊಳಗಾದ ವಿದ್ಯಾರ್ಥಿಗೆ ಕಾಲೇಜಲ್ಲಿರುವಾಗ್ಲೇ ಇತ್ತು ISIS ಸಂಪರ್ಕ!
ಇದೇ ವೇಳೆ ಬೆಳಗಾವಿ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಅಧಿವೇಶನ ನನಗೆ ತೃಪ್ತಿ ತಂದಿಲ್ಲ. ಸಾಕಷ್ಟು ವಿಚಾರಗಳನ್ನು ನಾವು ಎತ್ತಬೇಕಿತ್ತು. ವಿಪಕ್ಷವಾಗಿ ನಮ್ಮ ನಿರ್ವಹಣೆ ಸರಿಯಾಗಿರಲಿಲ್ಲ. ಇದು ನನಗೆ ಸಮಾಧಾನ ತಂದಿಲ್ಲ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿತ್ತು. ಕೆಲವೊಂದು ಕಡೆ ನಾವು ಕಾಂಪ್ರಮೈಸ್ ಆಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಚರ್ಚೆ ಅಂತ ಕಾಂಪ್ರಮೈಸ್ ಆಗಿದ್ದೇವೆ. ಈಗ ಸರ್ಕಾರ ಬಂದು ಏಳು ತಿಂಗಳು ಆಗಿದೆ. ಇದು ಯಾರದೆ ವೈಫಲ್ಯ ಅಲ್ಲ. ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇನ್ನೂ ಸುಧಾರಣೆ ಆಗಬೇಕಿದೆ. ನಾಯಕತ್ವದ ಕೊರತೆ ನಮಗಿಲ್ಲ ಎಂದರು.