50 ರೂ.ಗಾಗಿ ನಡೆಯಿತು ಕೊಲೆ- ಆರೋಪಿ ಅರೆಸ್ಟ್

Public TV
2 Min Read
prison 1

ಗುರುಗ್ರಾಮ: ಆಟವಾಡುತ್ತಿದ್ದ 18 ತಿಂಗಳ ಮಗುವನ್ನು ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನರೇಶ್ ಎಂಬ 22 ವರ್ಷದ ಯುವಕ ಆರೋಪಿಯಾಗಿದ್ದಾನೆ. ಪಕ್ಕದ ಮನೆಯ, 18 ತಿಂಗಳ ಮಗುವನ್ನು ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದಿದ್ದ ವ್ಯಕ್ತಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ. ಈ ಘಟನೆ ಫೆಬ್ರವರಿಯಲ್ಲಿ ನಡೆದಿದ್ದು, ಆರು ತಿಂಗಳ ಬಳಿಕ ಈತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ತಾನೇ ಮಗುವನ್ನು ಕೊಂದಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್

Police Jeep

ನಿರುದ್ಯೋಗಿ ಆಗಿರುವ ಈತ ಫರಿದಾಬಾದ್‍ನ ಸೆಕ್ಟರ್ 56ರ ನಿವಾಸಿ ಹಾಗೂ ಆತನೊಬ್ಬ ಮಾದಕ ವ್ಯಸನಿ ಎಂದು ಫರಿದಾಬಾದ್ ಪೊಲೀಸ್ ಪಿಆರ್‍ಒ ಸುಬೆ ಸಿಂಗ್ ತಿಳಿಸಿದ್ದಾರೆ. ಆತನಿಗೆ ಮಗುವಿನ ಮೇಲೆ ಯಾವುದೇ ದ್ವೇಷ ಇರಲಿಲ್ಲ. ಆದರೆ ಆ ಮಗುವಿನ ತಂದೆಗೂ-ಈ ನರೇಶ್‍ಗೂ ಪದೇಪದೆ ಜಗಳವಾಗುತ್ತಿತ್ತು. ಹಾಗೇ ಒಂದು ದಿನ ನರೇಶ್ ತನ್ನ ಪಕ್ಕದ ಮನೆಯವರೊಬ್ಬರ 8ವರ್ಷದ ಮಗಳ ಕೈಯಿಂದ 50 ರೂಪಾಯಿ ಕಸಿದಿದ್ದ. ಅದನ್ನು ನೋಡಿದ್ದ 18 ತಿಂಗಳ ಮಗುವಿನ ತಂದೆ, ನರೇಶ್ ಜತೆ ಜಗಳ ತೆಗೆದು, ಆತ ಮಾಡಿದ ಕೆಲಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ. ಅದಾದ ಮೇಲೆ ನರೇಶ್ ಹೇಗಾದರೂ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಎಂದು ಸುಬೆ ಸಿಂಗ್ ವಿವರಿಸಿದ್ದಾರೆ. ಇದನ್ನೂ ಓದಿ:  ಎಲ್ಲಿ ಸ್ಪರ್ಧೆ ಇದೆಯೋ ಅಲ್ಲಿ ಪಕ್ಷ ಬೆಳೆದಿದೆ ಎಂದರ್ಥ: ಕಟೀಲ್

police web

ಫೆಬ್ರವರಿ 5ರಂದು ನರೇಶ್ ಆ 18 ತಿಂಗಳ ಗಂಡು ಮಗು ಮನೆಯ ಬಳಿ ಒಬ್ಬನೇ ಆಡುತ್ತಿರುವುದು ಕಂಡು ಬಂತು. ಆತನನ್ನು ಎತ್ತಿಕೊಂಡು ತನ್ನ ಫ್ಲ್ಯಾಟ್‍ಗೆ ಕರೆದುಕೊಂಡು ಹೋದ. ನಂತರ ಮಗುವನ್ನು ದೊಡ್ಡದಾದ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ, ಯಾರಿಗೂ ಗೊತ್ತಾಗಬಾರದು ಎಂದು ಅದರ ಬಾಯಿಯನ್ನು ಮುಚ್ಚಿದ್ದ. ಮಗುವಿನ ಜೀವ ಹೋಯಿತು. ಇತ್ತ ಮಗುವಿನ ಪಾಲಕರು ಹುಡುಕಾಟ ಶುರು ಮಾಡಿದ್ದರು. ಅತ್ತ ನರೇಶ್, ಮಗುವನ್ನು ಹತ್ಯೆ ಮಾಡಿದ ತಕ್ಷಣ ತನ್ನ ಸ್ಥಳ ಬದಲಾಯಿಸಿದ್ದ. ಆದರೆ ಆರು ತಿಂಗಳ ನಂತರ ಆತನನ್ನು ಹಿಡಿಯಲಾಗಿದೆ. ಮಗುವಿನ ಕುತ್ತಿಗೆಯಿಂದ ಆತ ಕದ್ದಿದ್ದ ತಾಯತವನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸ್ ಪಿಆರ್‌ಒ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *