ಭೋಪಾಲ್: ನಾನ್‌ವೆಜ್ (Nonveg) ಅಡುಗೆ ಮಾಡುವ ವಿಚಾರಕ್ಕೆ ಗಂಡ ಹೆಂಡತಿ (Husband Wife) ನಡುವೆ ಜಗಳ ಉಂಟಾಗಿದ್ದು, ಇದನ್ನು ಬಿಡಿಸಲು ಮುಂದಾದ ನೆರೆಮನೆಯವನೇ (Neighbor) ಕೊಲೆಯಾಗಿರುವ ಘಟನೆ ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ (Bhopal) ನಡೆದಿದೆ.
ವರದಿಗಳ ಪ್ರಕಾರ ಮಂಗಳವಾರ ನಾನ್‌ವೆಜ್ ಮಾಡಬಾರದು ಎಂದು ಮಹಿಳೆ ವಾದಿಸಿದ್ದಕ್ಕೆ ಆಕೆಯ ಪತಿ ಪಪ್ಪು ಜಗಳ ಪ್ರಾರಂಭಿಸಿದ್ದಾನೆ. ಬಳಿಕ ದಂಪತಿಯ ವಾಗ್ವಾದ ನೆರೆಮನೆಯವನಾದ ಬಿಲ್ಲುವಿನ ಕಿವಿಗೆ ಬಿದ್ದು, ಅವರ ಜಗಳವನ್ನು ತಡೆಯುವ ಸಲುವಾಗಿ ಮಧ್ಯಪ್ರವೇಶಿಸಿದ್ದಾನೆ. ಆದರೆ ಪಪ್ಪು ಆತನನ್ನು ಹೊಡೆದು ಕೊಂದಿದ್ದಾನೆ.
Advertisement
Advertisement
ಹಿಂದೂ ಸಂಪ್ರದಾಯದ ಪ್ರಕಾರ ಹಲವರು ಮಂಗಳವಾರ ಮಂಗಳಕರ ದಿನವೆಂದು ಪರಿಗಣಿಸುತ್ತಾರೆ. ಹೀಗಾಗಿ ಕೆಲವರು ಅಂದು ಮಾಂಸಾಹಾರವನ್ನು ಸೇವಿಸುವುದಿಲ್ಲ. ಈ ಹಿನ್ನೆಲೆ ಮಹಿಳೆ ತನ್ನ ಪತಿಗೆ ಮಾಂಸಾಹಾರ ಮಾಡುವುದು ಬೇಡ ಎಂದು ವಾದಿಸಿದ್ದಾಳೆ. ಇದರಿಂದ ಕೋಪಗೊಂಡ ಪಪ್ಪು ಜಗಳ ಪ್ರಾರಂಭಿಸಿದ್ದಾನೆ. ಇದನ್ನೂ ಓದಿ: ಕಾಪಿ ಚೀಟಿಯನ್ನು ಲವ್ ಲೆಟರ್ ಎಂದು ತಪ್ಪಾಗಿ ಭಾವಿಸಿದ ವಿದ್ಯಾರ್ಥಿನಿ- ವಿದ್ಯಾರ್ಥಿಯ ಬರ್ಬರ ಕೊಲೆ
Advertisement
ಗಲಾಟೆ ಕೇಳಿದ ಬಿಲ್ಲು ಅವರಿಬ್ಬರ ಜಗಳವನ್ನು ಬಿಡಿಸಲು ಹೋಗಿ, ಸಮಸ್ಯೆಯನ್ನು ಇತ್ಯರ್ಥವೇನೋ ಮಾಡಿ ವಾಪಾಸ್ ತನ್ನ ಮನೆಗೆ ಬಂದಿದ್ದಾನೆ. ಆದರೆ ಬಳಿಕ ಪಪ್ಪು ಬಿಲ್ಲುವಿನ ಮನೆಗೆ ಹೋಗಿ ಹೊಡೆದು ಕೊಂದಿದ್ದಾನೆ.
Advertisement
ಬಿಲ್ಲು ಸಾವಿನ ಬಳಿಕ ಪೊಲೀಸರು ಆರೋಪಿಯ ಪತ್ನಿಯ ಹೇಳಿಕೆಯ ಆಧಾರದ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಅದೇ ದಿನ ಆರೋಪಿ ಪಪ್ಪುವನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪಟಾಕಿ ಸಂಗ್ರಹಿಸಿದ್ದ ಗೋಡೌನ್‌ನಲ್ಲಿ ಸ್ಫೋಟ – 4 ಸಾವು, 7 ಜನ ಗಂಭೀರ