Bengaluru City

ಕೌಂಪೌಂಡ್ ಕುಸಿದುಬಿದ್ದಿದ್ದಕ್ಕೆ ಗಲಾಟೆ, ವ್ಯಕ್ತಿಗೆ ಚಾಕು ಇರಿತ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

Published

on

Share this

ಬೆಂಗಳೂರು: ಕಾಂಪೌಂಡ್ ಕುಸಿದು ಬಿದ್ದ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲು ಪಕ್ಕದ ಮನೆಯವರೇ ಯತ್ನಿಸಿರುವ ಘಟನೆ ಬೆಂಗಳೂರಿನ ಹೆಬ್ಬಾಳದ ವೀರಣ್ಣಪಾಳ್ಯದಲ್ಲಿ ನಡೆದಿದೆ.

ಏಪ್ರಿಲ್ 9 ರಂದು ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀರಾಮ್ ಜೈನ್ ಹಲ್ಲೆಗೊಳಗಾದವರಾಗಿದ್ದು, ಇವರ ಮೇಲೆ ಪಕ್ಕದ ಮನೆಯ ಕೃಷ್ಣಪ್ಪ ಹಾಗೂ ಅವರ ಮೊಮ್ಮಗ ದೀಪು ದಾಳಿ ನಡೆಸಿದ್ದಾರೆ. ಚಾಕುವಿನಿಂದ ಹತ್ತಾರು ಬಾರಿ ಇರಿಯುವ ದೃಶ್ಯಾವಳಿ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.

ನಡೆದಿದ್ದೇನು?: ಶ್ರೀರಾಮ್ ತಮ್ಮ ಮನೆಯ ಚೇಂಬರ್ ತುಂಬಿಕೊಂಡಿದ್ದರಿಂದ ಅದನ್ನ ಕ್ಲೀನ್ ಮಾಡಿಸ್ತಿದ್ದರು. ಈ ವೇಳೆ ಕೃಷ್ಣಪ್ಪನ ಮನೆಯ ಕಾಂಪೌಂಡ್ ಕುಸಿದುಬಿದ್ದಿತ್ತು. ಇದೇ ವಿಚಾರವಾಗಿ ಜಗಳ ನಡೆದು ಶ್ರೀರಾಮ್ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶ್ರೀರಾಮ್ ಜೈನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಕೆ.ಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

https://www.youtube.com/watch?v=dQXi4J-ms9I&feature=youtu.be

Click to comment

Leave a Reply

Your email address will not be published. Required fields are marked *

Advertisement
Advertisement