‘ನೈ ಪಾಯಸ’ ಸಾಮಾನ್ಯವಾಗಿ ಶಬರಿಮಲೈ ದೇವಸ್ಥಾನಗಳಲ್ಲಿ, ಕೇರಳದ ಅನೇಕ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ನೀಡಲಾಗುವ ವಿಶೇಷವಾದ ಸಾಂಪ್ರದಾಯಿಕ ಪಾಯಸವಾಗಿದೆ. ಈ ಟೆಸ್ಟ್‌ನಲ್ಲೇ ಪಾಯಸ ಸವಿಯಲು ನಿಮಗೆ ಈ ರೆಸಿಪಿ ಸಹಾಯ ಮಾಡುತ್ತೆ.
Advertisement
ಬೇಕಾಗುವ ಸಾಮಗ್ರಿಗಳು:
* ನುಚ್ಚು ಮಾಡಿದ ಬ್ರೌನ್ ರೈಸ್ – 1/2 ಕಪ್
* ತುಪ್ಪ – 4 ಟೀಸ್ಪೂನ್
* ನುಚ್ಚು ಮಾಡಿ ಬೆಲ್ಲ – 1 ಕಪ್
* ನೀರು – 1 ಕಪ್
Advertisement
* ತುರಿದ ತೆಂಗಿನಕಾಯಿ – 1/4 ಕಪ್
* ಏಲಕ್ಕಿ ಪುಡಿ – 1/4 ಟೀಸ್ಪೂನ್
* ಒಣ ಶುಂಠಿ ಪುಡಿ – ಒಂದು ಸಣ್ಣ ಪಿಂಚ್
* ಮುರಿದ ಗೋಡಂಬಿ – 7 ಇದನ್ನೂ ಓದಿ: ಸೋರೆಕಾಯಿಯಲ್ಲಿ ಮಾಡಿ ಸೂಪರ್ ರೆಸಿಪಿ ‘ಸ್ಟಫ್ಡ್ ಲೌಕಿ’
Advertisement
ಮಾಡುವ ವಿಧಾನ:
* ಬೆಲ್ಲವನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಅದನ್ನು ಚೆನ್ನಾಗಿ ಪುಡಿಮಾಡಿ. ನಂತರ ಅದನ್ನು ಸ್ವಲ್ಪ ಬಿಸಿ ಮಾಡಿ, ಪಾಕದ ರೀತಿ ಮಾಡಿಕೊಳ್ಳಿ.
* ಮಧ್ಯಮ ಉರಿಯಲ್ಲಿ ಕನಿಷ್ಠ 5 ಸೀಟಿಗಳವರೆಗೆ ಬ್ರೌನ್ ರೈಸ್ ಮೃದುವಾಗುವವರೆಗೆ ಬೇಯಿಸಬೇಕು. ನಂತರ ಬೆಲ್ಲದ ಪಾಕವನ್ನು ಬ್ರೌನ್ ರೈಸ್‍ಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
Advertisement
* ಬೆಲ್ಲದ ಪಾಕವು ಅನ್ನದೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ತುರಿದ ತೆಂಗಿನಕಾಯಿಯನ್ನು ಸೇರಿಸಿ.
* ಕೊನೆಗೆ ಗೋಡಂಬಿ, ಏಲಕ್ಕಿ ಪುಡಿ, ಒಣ ಶುಂಠಿ ಪುಡಿ ಸೇರಿಸಿ ಮಿಶ್ರಣ ಮಾಡಿ ಗ್ಯಾಸ್ ಸ್ವಿಚ್ ಆಫ್ ಮಾಡಿ.
* ಪಾಯಸ ಬೆಚ್ಚಗಾದ ಮೇಲೆ ಬಡಿಸಿ ಇದನ್ನೂ ಓದಿ: ಬೇಸಿಗೆಗೆ ತಂಪಾದ ಸೋಲ್ ಕಡಿ ಅಥವಾ ಕೋಕಮ್ ಡ್ರಿಂಕ್ ಮಾಡಿ ಸವಿಯಿರಿ