ಬೆಂಗಳೂರು: ಇದು ಪಾರ್ಶ್ವ ಚಂದ್ರಗ್ರಹಣ. ಇದನ್ನು ಎಲ್ಲಾ ದೇಶಗಳಲ್ಲೂ ವೀಕ್ಷಿಸಬಹುದು. ಆದರೆ ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ ಎಂದು ನೆಹರು ತಾರಾಲಯದ ವಿಜ್ಞಾನಿ ಆನಂದ್ ತಿಳಿಸಿದ್ದಾರೆ.
ಚಂದ್ರಗ್ರಹಣ ಕುರಿತು ಮಾತನಾಡಿದ ಅವರು, ಬೆಳಗಿನ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ
Advertisement
Advertisement
ಭೂಮಿಯ ನೆರಳಿನ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ ಎಂದು ವಿವರಿಸಿದ್ದಾರೆ.
Advertisement
1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ. ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ ಎಂದು ಹೇಳಿದ್ದಾರೆ.
Advertisement
ಗ್ರಹಣ ವೀಕ್ಷಣೆಗೆ ಬೇರೆ ಸಲಕರಣೆಗಳ ಅಗತ್ಯವಿಲ್ಲ. ಚಂದ್ರಗ್ರಹಣ ಬರಿಗಣ್ಣಿನಿಂದ ನೋಡಬಹುದು. ಟೆಲಿಸ್ಕೋಪ್‌ಗಳ ಅಗತ್ಯ ಇರಲ್ಲ. ಕುತೂಹಲಕ್ಕಾಗಿ ಟೆಲಿಸ್ಕೋಪ್‌ಗಳ ಮೂಲಕ ವೀಕ್ಷಣೆಗೆ ಅವಕಾಶವಿದೆ. ಬೆಳಕಿನ ಮೂಲಕ್ಕೆ ಅಡ್ಡ ಬರುವ ಕಾಯವೇ ಗ್ರಹಣ. ಬೆಳಕು ವ್ಯತ್ಯಾಸಗಳಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ
ಚಂದ್ರನ ಮೇಲೆ ಭೂಮಿ ಹಾದು ಹೋಗುತ್ತದೆ. ಚಂದ್ರನ ದೂರ, ಭೂಮಿ, ಚಂದಿರನ ಅಂತರ ಅಳೆಯಲು ನೆರವಾಗಿದೆ ಈ ಗ್ರಹಣ. ಗ್ರಹಣದ ವೇಳೆ ಪ್ರಾಕೃತಿಕ ವಿಕೋಪಗಳು ಆಗೋದು ಕಾಕತಾಳೀಯ ಎಂದು ತಿಳಿಸಿದ್ದಾರೆ.
Web Stories