– ನಿಮ್ಮ ಮಗನನ್ನ ನೀವೇ ಕೊಲ್ಲಿ, ಅದೇ ನಿಜವಾದ ಕ್ಷಮೆ ಎಂದ ನಿರಂಜನ್
ಹುಬ್ಬಳ್ಳಿ: ನನ್ನ ಮಗಳ ಹತ್ಯೆ ಪ್ರಕರಣವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಆಯುಕ್ತರು ಗೃಹ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗೆ ಆದ್ರೆ, ನಾವೂ ಸಹ ಸಿಎಂಗೆ (Chief Minister) ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮೃತ ನೇಹಾಳ ತಂದೆ ನಿರಂಜನ್ ಹಿರೇಮಠ (Niranjan Hiremath) ಅವರು ಅಳಲು ತೋಡಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನೇಹಾ ತಂದೆ, ನಮ್ಮದು ಕ್ರಿಮಿನಲ್ ಹಿನ್ನೆಲೆಯುಳ್ಳ ಕುಟುಂಬ ಅಲ್ಲ. ಐದು ಮಂದಿ ಸೇರಿ ನನ್ನ ಮಗಳ ಹತ್ಯೆ ಮಾಡಿದ್ದಾರೆ. ಉಳಿದ ಫಯಾಜ್‌ನನ್ನ (Fayaz) ಮುಂದಕ್ಕೆ ಬಿಟ್ಟು ಕೊಲೆ ಮಾಡಿಸಿದ್ದಾರೆ. ಆ ಸಂದರ್ಭದಲ್ಲಿ ಉಳಿದ ನಾಲ್ಕೂ ಜನರು ಅಲ್ಲೇ ಇದ್ದರು. ಆದ್ರೆ 100ಕ್ಕೆ ನೂರು ಪೊಲೀಸ್ ಆಯುಕ್ತರು (Hubli Police Commissioner) ಗೃಹ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಆಡಳಿತ ಪಕ್ಷದ ಕೆಲ ಸ್ಥಳೀಯ ಜನಪ್ರತಿನಿಧಿಗಳೂ ತಪ್ಪು ಮಾಹಿತಿ ನೀಡಿದ್ದಾರೆ. ಗೃಹಸಚಿವರನ್ನ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಬೆಳೆವಣಿಗೆ ನೋಡಿದರೆ ಪ್ರಕರಣ ದಾರಿ ತಪ್ಪುವ ಹಾಗೆ ಕಾಣುತ್ತಿದೆ. ಸಿ.ಎಂ ಅವರಿಗೆ ಪತ್ರ ಬರೆದು ನಾವೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿದ್ದಾರೆ.
ಈ ಪ್ರಕರಣದ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಬೆನ್ನಿಗೆ ನಿಂತು ಧೈರ್ಯ ಹೇಳಬೇಕು ಎಂದು ಪ್ರಕರಣ ಸತ್ಯಾಸತ್ಯತೆ ಹೊರತೆಗೆಯಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದುವೆಗೆ ಒಪ್ಪದಿದ್ದಕ್ಕೆ ಹತಾಶೆಯಿಂದ ಕೊಂದಿದ್ದಾನೆ; ನೇಹಾ ತಂದೆ ಹೇಳಿದ್ದೇನು? – ಎಫ್‌ಐಆರ್‌ನಲ್ಲಿ ಏನಿದೆ?
ಪರಮೇಶ್ವರ್ ವಿರುದ್ಧ ಬೇಸರ:
ಗೃಹ ಸಚಿವ ಪರಮೇಶ್ವರ್ (G Parameshwara) ಅವರು ವಿಷಾದ ವ್ಯಕ್ತಪಡಿಸಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ನಿರಂಜನ ಅವರು, ಗೃಹ ಸಚಿವರು ವಿಷಾದ ವ್ಯಕ್ತಪಡಿಸಿದ್ದು ಇರಲಿ, ಆದ್ರೆ ಅವರು ನಮ್ಮ ಮನೆಗೆ ಬಂದು ಮಾತನಾಡಬೇಕಿತ್ತಲ್ಲ. ಆ ರೀತಿಯ ಬೆಳವಣಿಗೆ ಆಗಿಲ್ಲ. ಈಗ ನಾನು ಮಾತನಾಡಿದ್ದೇನೆ ಎಂದು ಸೃಷ್ಟಿ ಮಾಡಿ ಹೇಳುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
ಇದೇ ವೇಳೆ ಮಗನಿಗೆ ಶಿಕ್ಷೆ ಆಗಬೇಕೆಂಬ ಹಂತಕ ಫಯಾಜ್ ತಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಗಳನ್ನು ಕಳೆದುಕೊಂಡಿದ್ದೇನೆ. ಆ ಕುಟುಂಬ ಕ್ಷಮೆ ಕೇಳಿದರೆ ಸಾಲದು. ನಿಮ್ಮ ಮಗ ಇಷ್ಟು ವಿಕೃತ ಮನೋಭಾವ ಇರೋದರ ಮಾಹಿತಿ ನೀಡಬೇಕಿತ್ತು. ಮೊದಲ ಹೇಳಿದ್ದರೇ ಈ ದುರಂತ ಆಗುತ್ತಿಲ್ಲ. ನಮ್ಮ ಮಗಳನ್ನ ಉಳಿಸಿಕೊಳ್ಳುತ್ತಿದ್ದೆವು. ಅವರ ದಾರಿತಪ್ಪಿದ್ದಾನೆ ಅಂದಾಗ ಮಾಹಿತಿ ನೀಡಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂಥ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನೇಹಾ ಕೊಲೆ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯೆ
ನಿಮ್ಮ ಮಗನನ್ನು ನೀವೇ ಕೊಲ್ಲಿ:
ಈ ಹಿಂದೆಯೇ ಫಜಾಜ್ ತನ್ನ ತಂದೆಯನ್ನ ಕೊಲ್ಲಲು ಹೋಗಿದ್ದ ಅಂತಾ ಕೇಳಿದ್ದೇನೆ. ಅವರು ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಈವತ್ತು ನನ್ನ ಮಗಳು ಉಳಿಯುತ್ತಿದ್ದಳು. ಈಗ ನಿಮ್ಮ ಮಗನಿಗೆ ನೀವೇ ಜಾಮೀನುಕೊಟ್ಟು ಹೊರಗೆ ಕರೆದುಕೊಂಡು ಬನ್ನಿ. ನನ್ನ ಮಗಳಿಗೆ ಮಾಡಿದಂತೆನೀವು ಮಾಡಿ, ಅದೇ ನಿಜವಾದ ಕ್ಷಮೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್ ತಾಯಿ ಕಣ್ಣೀರು