ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಅದರಲ್ಲೂ ನಟ ನಟಿಯರಿಗೂ ನಾನಾ ಪಕ್ಷಗಳು ಟಿಕೆಟ್ ನೀಡುತ್ತಿವೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ಈ ಬಾರಿಯ ಲೋಕಸಭಾ ಅಖಾಡದಲ್ಲಿ ಹಲವು ತಾರೆಯರ ಹೆಸರು ಕೇಳಿ ಬಂದಿದೆ. ಅದರಲ್ಲಿ ಬಾಲಿವುಡ್ ಬೆಡಗಿ ನೇಹಾ ಶರ್ಮಾ ಕೂಡ ಒಬ್ಬರು.
Advertisement
ನವಾಜುದ್ದೀನ್ ಸಿದ್ದಿಕ್ಕಿ ಸೇರಿದಂತೆ ಹಲವಾರು ತಾರೆಯರ ಜೊತೆ ತೆರೆ ಹಂಚಿಕೊಂಡಿರುವ ನೇಹಾ, ಇದೀಗ ಬಿಹಾರದ ಭಾಗಲಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರೂ ಆಗಿರುವ ನೇಹಾ ಅವರ ತಂದೆ ಅಜಯ್ ಶರ್ಮಾ ಮಗಳಿಗಾಗಿ ಟಿಕೆಟ್ ಕೊಡಿಸಲಿದ್ದಾರಂತೆ.
Advertisement
Advertisement
ಭಾಗಲಪುರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿರುವುದರಿಂದ ಅದೇ ಕ್ಷೇತ್ರದಲ್ಲೇ ಮಗಳ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಅಜಯ್ ಶರ್ಮಾ. ಈಗಾಗಲೇ ಕಾಂಗ್ರೆಸ್ ಹಲವು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಭಾಗಲಪುರ ಕ್ಷೇತ್ರವನ್ನು ಕಾಂಗ್ರೆಸ್ ಗೆ ಉಳಿಸಿಕೊಳ್ಳುವ ಕಸರತ್ತನ್ನೂ ಅವರು ಮುಂದುವರೆಸಿದ್ದಾರೆ.