– ಮೊಬೈಲ್ ಸೀಜ್ ಆದ ರಾತ್ರಿ ಫೋಟೋ ವೈರಲ್
ಹುಬ್ಬಳ್ಳಿ: ಮುಸಲ್ಮಾನ ಮುಖಂಡರು ಅವರ ಹುಡುಗರಿಗೆ ಮೊದಲು ಬುದ್ಧಿ ಹೇಳಬೇಕು. ಅಪರಾಧ ಕೃತ್ಯಗಳನ್ನು ಮಾಡಿದರೆ ನಿಮ್ಮ ಕುಟುಂಬ, ವ್ಯಾಪಾರ, ವಹಿವಾಟಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ (Neha) ಅವರ ಮನೆಗೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಲವ್ ಜಿಹಾದ್ ಷಡ್ಯಂತ್ರದ ಸಮಗ್ರ ತನಿಖೆಯಾಗಬೇಕು. ಈ ಮಾನಸಿಕತೆ ಎಲ್ಲಿಂದ, ಯಾರಿಂದ ಬರುತ್ತಿದೆ? ಇಂತಹ ಕೃತ್ಯಗಳು ಇಲ್ಲಿಗೆ ಕೊನೆಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: 9 ಅಲ್ಲ 14 ಬಾರಿ ನೇಹಾಳನ್ನು ಇರಿದು ಕೊಂದ ಫಯಾಜ್- ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿದೆ?
ಆರೋಪಿಯ ಮೊಬೈಲ್ ಸೀಜ್ ಆದ ರಾತ್ರಿಯೇ ಅದರಲ್ಲಿನ ಫೋಟೋ ಹೊರಗೆ ಬಂದಿದೆ. ಸರ್ಕಾರಕ್ಕೆ ಈ ಪ್ರಕರಣದ ದಿಕ್ಕು ತಪ್ಪಿಸಬೇಕಿತ್ತು. ಇಬ್ಬರ ನಡುವೆ ಲವ್ ಇತ್ತು ಎಂದು ಬಿಂಬಿಸಿದವರ ಬಂಧನವಾಗಬೇಕು. ಮುಸಲ್ಮಾನರು, ಆತನ ಕುಟುಂಬ ಬಹಿಷ್ಕರಿಸುವ ಫತ್ವಾ ಹೊರಡಿಸುತ್ತಿಲ್ಲ. ಕೇವಲ ಗಲ್ಲಿಗೇರಿಸಿ ಎನ್ನುವ ನಾಟಕ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಈ ಕೊಲೆಯ ಹಿಂದೆ ಹಲವರಿದ್ದಾರೆ ಎಂದು ನೇಹಾ ತಂದೆ ಹೇಳಿದ್ದಾರೆ. ಅಧಿಕಾರಿಗಳು ಇದನ್ನು ಸರಿಯಾಗಿ ತನಿಖೆ ಮಾಡಬೇಕು. ಕರ್ನಾಟಕದ ಪೊಲೀಸರು ಸಮರ್ಥರಾಗಿದ್ದಾರೆ. ರಾಜಕೀಯ ಒತ್ತಡ, ವೋಟ್ ಬ್ಯಾಂಕ್, ಮುಸಲ್ಮಾನರ ಓಲೈಕೆಗಾಗಿ ಈ ತನಿಖೆ ದಾರಿ ತಪ್ಪಬಾರದು. ಈ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಿರುವುದು, ವಿಶೇಷ ನ್ಯಾಯಾಲಯ ಸ್ಥಾಪನೆ ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನೇಹಾ ಹಿರೇಮಠ ತಂದೆಯ ಬಳಿ ಕ್ಷಮೆಯಾಚಿಸಿದ ಸಿಎಂ!