ಮುಂಬೈ: ಬಾಲಿವುಡ್‍ನಲ್ಲಿ ತಮ್ಮ ಗಾಯನ ಪ್ರತಿಭೆ ಹಾಗೂ ಸೌಂದರ್ಯದ ಮೂಲಕವೇ ಖ್ಯಾತಿ ಪಡೆದಿರುವ ನೇಹಾ ಕಕ್ಕರ್ ಪತಿ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಪತಿ ರೋಹನ್ ಪ್ರೀತ್ ಸಿಂಗ್ ಜೊತೆ ಕಾರಿನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಅವರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು.
ಪತಿ ಕೈ ಹಿಡಿದುಕೊಂಡು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ನೇಹಾ ಕಕ್ಕರ್ ಕ್ಯಾಮೆರಾಗೆ ಹಾಯ್ ಹೇಳಿದರು. ಇದನ್ನೂ ಓದಿ: ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ
ಈ ವೇಳೆ ರೋಹನ್ ಪ್ರೀತ್ ಸಿಂಗ್ ವೈಟ್ ಆ್ಯಂಡ್ ಡ್ರೆಸ್ ತೊಟ್ಟು, ಅದಕ್ಕೆ ಸೂಟ್ ಆಗುವಂತಹ ಬ್ಲ್ಯಾಕ್ ಕಲರ್ ಕ್ಯಾಪ್ ತೊಟ್ಟಿದ್ದರೆ, ನೇಹಾ ಪ್ಲಾಸಾ ಪ್ಯಾಂಟ್ ಮತ್ತು ಶಾರ್ಟ್ ಟಾಪ್, ಯೆಲ್ಲೋ ಕಲರ್ ಸ್ಲಿಪ್ಪರ್ ಧರಿಸಿದ್ದರು.
ನೇಹಾ ಕಕ್ಕರ್ ಒಂದು ಕೈಯಲ್ಲಿ ಪುಟ್ಟ ಹ್ಯಾಂಡ್ ಬ್ಯಾಗ್ ಹಿಡಿದುಕೊಂಡಿದ್ದರೆ, ಮತ್ತೊಂದರಲ್ಲಿ ಪತಿ ಕೈ ಹಿಡಿದುಕೊಂಡು ವಿಮಾನ ನಿಲ್ದಾಣದಲ್ಲಿ ಸಾಗಿದರು. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್
ರಿಷಿಕೇಶ ಮೂಲದವರಾದ ನೇಹಾ ಕಕ್ಕರ್ ನಾಲ್ಕನೇ ವಯಸ್ಸಿನಲ್ಲಿಯೇ ವಿವಿಧ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಅಲ್ಲದೇ ಇಂಡಿಯನ್ ಐಡಿಯಲ್ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದರು. ಕಳೆದ ವರ್ಷ ನೇಹಾ ಕಕ್ಕರ್ ಪಂಜಾಬಿ ಗಾಯಕರಾಗಿರುವ ರೋಹನ್ ಪ್ರೀತ್ ಸಿಂಗ್‍ರನ್ನು ನವದೆಹಲಿಯ ಗುರುದ್ವಾರದಲ್ಲಿ ಸಪ್ತಪದಿ ತುಳಿದಿದ್ದರು.