ಬಾಲಿವುಡ್ ಪ್ರಸಿದ್ಧ ಗಾಯಕಿ ನೇಹಾ ಕಕ್ಕರ್ ಮತ್ತು ರೋಹನ್ ಪ್ರೀತ್ ಸಿಂಗ್ ದಂಪತಿಯ ಬೆಲೆ ಬಾಳುವ ವಸ್ತು ಕಳವು ಮಾಡಲಾಗಿದೆ. ಹಿಮಾಚಲ ಪ್ರದೇಶದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದಿಯ ಸಾಕಷ್ಟು ಹಾಡುಗಳಿಗೆ ಧ್ವನಿಯಾಗುವ ಮೂಲಕ ಗುರುತಿಸಿಕೊಂಡಿದ್ದ ಗಾಯಕಿ ನೇಹಾ ಕಕ್ಕರ್ ತಮ್ಮ ಪತಿ ಜತೆ ಹಿಮಾಚಲಕ್ಕೆ ಪ್ರವಾಸಕ್ಕೆ ತೆರಳಿದ್ರು. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಹೋಟೆಲ್‌ವೊಂದರಲ್ಲಿ ವಾಸವಿದ್ರು, ಈ ವೇಳೆ ಹೋಟೆಲ್ ರೂಮ್‌ನಿಂದ ರೋಹನ್ ಅವರ ವಜ್ರ ಉಂಗುರ, ಐಫೋನ್, ಸ್ಮಾರ್ಟ್‌ವಾಚ್ ಮತ್ತು ನಗದನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತಷ್ಟು ಹಾಟ್ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಚಳಿಬಿಡಿಸಿದ ಇರಾ ಖಾನ್
View this post on Instagram
ರೋಹನ್ ವಾಸವಿದ್ದ ರೂಮ್‌ನಿಂದ ವಜ್ರದ ಉಂಗುರ ಜತೆ ಬೆಲೆಬಾಳುವ ವಸ್ತು ಕಳುವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.