ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ್ (Neha Hiremath) ತಂದೆ ನಿರಂಜನ್ ಹಿರೇಮಠ್‌ಗೆ (Niranjan Hiremath) ಧೈರ್ಯದಿಂದ ಇರುವಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಕಾನೂನು ಸಚಿವ ಎಚ್. ಕೆ. ಪಾಟೀಲ್ (HK Patil) ಹೇಳಿದ್ದಾರೆ.
ಹುಬ್ಬಳ್ಳಿಲ್ಲಿ ನೇಹಾ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿವಾರ್ಯ ಕಾರಣದಿಂದ ಸಿಎಂ ಇಲ್ಲಿಗೆ ಬರಲಾಗಿಲ್ಲ. ಆದರೆ ಇಂದು ನಿರಂಜನ್ ಹಿರೇಮಠ್ ಜೊತೆ ಸಿಎಂ ಮಾತನಾಡಿದ್ದು, ಸಾಂತ್ವನ ಹೇಳಿದ್ದಾರೆ ಎಂದರು.
Advertisement
Advertisement
ನೇಹಾ ಪ್ರಕರಣ ನ್ಯಾಯದಾನ ವಿಳಂಬ ಆಗಬಾರದೆಂದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ. ಇವತ್ತು ಉಚ್ಛ ನ್ಯಾಯಾಲಯಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ ಪತ್ರ ತಲುಪುತ್ತೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ. ಬಹುಬೇಗ ನೇಹಾಳ ಸಾವಿಗೆ ನ್ಯಾಯ ಸಿಗುತ್ತೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಎಳೆದೊಯ್ಯಲು ಯತ್ನಿಸಿದ ಆಕೆಯ ಕುಟುಂಬ!
Advertisement
Advertisement
ಬರ್ಬರ ಹತ್ಯೆ ಮತ್ತು ಸಮಾಜದ ಮುಖಂಡರ ಭೇಟಿ ವೇಳೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ ವ್ಯಕ್ತವಾಗಿತ್ತು. ಹೀಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನಿಸಿದ್ದೇವೆ. ನಾವು ಸಾಂತ್ವನ ಹೇಳಲು ಬಂದಿದ್ದೇವೆ. ನಮ್ಮ ಕರ್ತವ್ಯ ನಿಭಾಯಿಸಿ ನಾವು ಅವರ ಮನೆಗೆ ಬಂದಿದ್ದೇವೆ. ವೈಯಕ್ತಿಕ ಘಟನೆ ಎಂಬ ಹೇಳಿಕೆ ಕುರಿತು ಗೃಹ ಸಚಿವ ಮತ್ತು ಸಿಎಂ ತಮ್ಮ ಸಮಾಜಯಿಸಿ ಹೇಳಿದ್ದಾರೆ ಎಂದರು.